2-3 ಪ್ರಧಾನಿಗಳ ಸಾವು: ನಿಖರ ಭವಿಷ್ಯಕ್ಕೆ ಹೆಸರಾದ ಕೋಡಿಮಠ ಸ್ವಾಮೀಜಿ ಶಾಕಿಂಗ್ ಭವಿಷ್ಯ

ಧಾರವಾಡ: ನಿಖರ ಭವಿಷ್ಯಕ್ಕೆ ಹೆಸರಾದ ಕೋಡಿಮಠದ ಡಾ. ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿ ಸ್ಫೋಟಕ ಭವಿಷ್ಯ ನುಡಿದಿದ್ದಾರೆ.

ಈಗ ನಡೆಯುತ್ತಿರುವ ಕ್ರೋಧಿನಾಮ ಸಂವತ್ಸರದಲ್ಲಿ ಒಳಿತಿಗಿಂತ ಕೆಡುಕು ಹೆಚ್ಚು ಎಂದು ಹೇಳಬಹುದು. ಭೂಮಿ, ಅಗ್ನಿ, ಆಕಾಶ, ವಾಯು, ಜಲ ಈ ಐದರಿಂದ ಭೂಕುಸಿತ, ಜಲಪ್ರಳಯ ಲಕ್ಷಣಗಳು ಇವೆ. ಗಾಳಿಯಿಂದಲೂ ತೊಂದರೆಯಾಗುತ್ತದೆ ಎಂದು ಶ್ರೀಗಳು ಹೇಳಿದ್ದಾರೆ.

ಆಕಾಶ ತತ್ವ ಆಗಲಿದ್ದು, ಆ ಆಕಾಶ ತತ್ವ ಏನು ಎನ್ನುವುದನ್ನು ಶ್ರಾವಣದಲ್ಲಿ ಹೇಳುತ್ತೇನೆ. ದೇಶದಲ್ಲಿ ಅಧಿಕಾರಕ್ಕಾಗಿ ಕೂಡಿದ್ದಾರೆ. ಇನ್ನೂ ಅಂಗಡಿ ಓಪನ್ ಆಗಿಲ್ಲ. ವ್ಯಾಪಾರ ಶುರುವಾಗಿಲ್ಲ. ವ್ಯಾಪಾರ ಶುರುವಾದ ನಂತರ ರಾಷ್ಟ್ರ ರಾಜಕಾರಣದ ಭವಿಷ್ಯ ಹೇಳುತ್ತೇನೆ. ಶ್ರಾವಣ ಮಾಸದಲ್ಲಿ ಸಮಗ್ರವಾಗಿ ತಿಳಿಸುತ್ತೇನೆ. ಈಗಲೇ ಅಶುಭ ನುಡಿಯಬಾರದು. ಶ್ರಾವಣದಲ್ಲಿ ಶುಭ ಅಶುಭದ ಬಗ್ಗೆ ಹೇಳುತ್ತೇನೆ ಎಂದು ಹೇಳಿದ್ದಾರೆ.

ಬರೆಯದೆ ಓದುವುದು ಕಣ್ಣು, ಕರೆಯದೆ ಬರುವುದು ಕೋಪ, ಬರಿಗಾಲಲ್ಲಿ ನಡೆಯುವವನ ಮನಸ್ಸು ನಿಯಂತ್ರಣದಲ್ಲಿರಬೇಕು. ದುಡ್ಡು ಅಧಿಕಾರ ಮುಖ್ಯ ಎಂದು ಹೊರಟಿದ್ದು ಅಧಃಪತನಕ್ಕೆ ಇದು ಕಾರಣವಾಗುತ್ತದೆ. ಜಗತ್ತಿನಲ್ಲಿ ಎರಡು-ಮೂರು ಪ್ರಧಾನಿಗಳ ಸಾವು ಆಗಲಿದೆ. ದೊಡ್ಡವರಿಗೆ ನೋವು ದುಃಖ ಆಗಲಿದೆ ಎಂದು ಭವಿಷ್ಯ ನುಡಿದಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read