
ಮಕ್ಕಳಾದಿಯಾಗಿ ಪ್ರತಿಯೊಬ್ಬರಿಗೂ ಚಾಕಲೇಟ್ ಎಂದರೆ ಇಷ್ಟ. ಅದರಲ್ಲೂ ಡಾರ್ಕ್ ಚಾಕಲೇಟ್, ಮಿಲ್ಕ್ ಚಾಕಲೇಟ್ ಅಥವಾ ಡ್ರೈ ಚಾಕಲೇಟ್ ಎಂದರೆ ಎಲ್ಲರ ಬಾಯಲ್ಲಿ ನೀರೂರುತ್ತದೆ. ಆದರೆ ಇದನ್ನು ಖರೀದಿಸುವ ಮುನ್ನ ಕೆಲವು ಅಂಶಗಳ ಗಮನ ಹರಿಸುವುದು ಒಳ್ಳೆಯದು.
ನೀವು ಕೊಳ್ಳುವ ನಿಮ್ಮ ನೆಚ್ಚಿನ ಚಾಕಲೇಟ್ ನಲ್ಲಿ ಕೊಕೋದ ಪ್ರಮಾಣ ಎಷ್ಟಿದೆ ಎಂದು ಪರೀಕ್ಷಿಸಿಕೊಳ್ಳಿ ಶೇಕಡ 85 ಗಿಂತ ಹೆಚ್ಚಿನ ಪ್ರಮಾಣದಲ್ಲಿದ್ದರೆ ಅದು ಸೇವನೆಗೆ ಉತ್ತಮವಾಗಿದೆ. ಇದು ಹೃದ್ರೋಗಗಳಿಂದ ರಕ್ಷಣೆ ನೀಡುತ್ತದೆ.
ಬಿಳಿ ಚಾಕಲೇಟ್ ಗಳಿಗೆ ಮೊದಲ ಆದ್ಯತೆ ನೀಡದಿರಿ. ಇದರಲ್ಲಿ ಸಕ್ಕರೆಯ ಅಂಶ ಹೆಚ್ಚಿರುತ್ತದೆ ಹಾಗೂ ಬೀಜದ ಪ್ರಮಾಣ ಕಡಿಮೆ ಇರುತ್ತದೆ.
ಇನ್ನು ಚಾಕೊಲೇಟ್ ಗಳಲ್ಲಿ ಸಾವಯವದ ಆಯ್ಕೆಗಳಿವೆ. ಇದರಲ್ಲಿ ಆಂಟಿಆಕ್ಸಿಡೆಂಟ್ ಮತ್ತು ಪೋಷಕಾಂಶಗಳು ಸಾಕಷ್ಟಿದ್ದು ಹಲವು ರೀತಿಯಿಂದ ಆರೋಗ್ಯವನ್ನು ಕಾಪಾಡುತ್ತದೆ. ಎಕ್ಸ್ ಪೈರಿ ದಿನಾಂಕವನ್ನು ನೋಡಿ ತೆಗೆದುಕೊಳ್ಳಿ. ಕೊಕೋ ಬಟರ್, ಚಾಕಲೇಟ್ ಗಳು ರುಚಿಯಾಗಿರುತ್ತದೆ ಎಂಬುದೇನೋ ನಿಜ ಆದರೆ ಬಹುಬೇಗ ಕೆಡುತ್ತವೆ.