ಮನೆಯಲ್ಲಿ ಗಾಳಿ ಗಂಟೆ (ವಿಂಡ್ ಚೈಮ್ ) ಹಾಕೋದು ಶುಭವೆಂದು ಪರಿಗಣಿಸಲಾಗಿದೆ. ಫೆಂಗ್ ಶೂಯಿ ಪ್ರಕಾರ ಮನೆಯಲ್ಲಿ ಗಾಳಿಗಂಟೆ ಹಾಕೋದು ಶುಭ ಸಂಕೇತ. ಹಾಗಾಗಿಯೇ ಅನೇಕರ ಮನೆಯಲ್ಲಿ ನಾವು ಗಾಳಿ ಗಂಟೆಯನ್ನು ನೋಡಬಹುದು. ಗಾಳಿಗಂಟೆ ಹಾಕೋದು ಬಹಳ ಒಳ್ಳೆಯದು ನಿಜ.
ಆದ್ರೆ ಮನೆಗೆ ಗಾಳಿ ಗಂಟೆ ಹಾಕುವ ಮುನ್ನ ಕೆಲವೊಂದು ವಿಷಯಗಳನ್ನು ತಿಳಿದುಕೊಳ್ಳಬೇಕಾಗುತ್ತದೆ. ನಿಯಮ ತಪ್ಪಿದ್ರೆ ಗಾಳಿಗಂಟೆಯಿಂದ ಹಾನಿಯಾಗುವ ಸಾಧ್ಯತೆಗಳಿರುತ್ತವೆ.
ಫೆಂಗ್ ಶೂಯಿ ಪ್ರಕಾರ ಗಾಳಿ ಗಂಟೆ ಕೆಳಗೆ ಎಂದೂ ಕುಳಿತುಕೊಳ್ಳಬಾರದು. ಸಾಮಾನ್ಯವಾಗಿ ಎಲ್ಲರೂ ಈ ತಪ್ಪನ್ನು ಮಾಡ್ತಾರೆ. ಹಾಗೆ ಅದ್ರ ಅಡಿಯಲ್ಲಿ ಓಡಾಡಬಾರದು. ಇದ್ರಿಂದ ಶುಭವಾಗುವ ಬದಲು ಹಾನಿಯುಂಟು ಮಾಡುತ್ತದೆ.
ನೈರುತ್ಯ ದಿಕ್ಕಿನಲ್ಲಿ ಸ್ಟೋರ್ ರೂಂ, ಶೌಚಾಲಯ ಹಾಗು ಅಡುಗೆ ಮನೆ ಇದ್ದಲ್ಲಿ ಅಂತ ಜಾಗದಲ್ಲಿ ಲೋಹದ ಗಾಳಿ ಗಂಟೆ ಹಾಕುವುದು ಶುಭಕರ.
ಫೆಂಗ್ ಶೂಯಿ ಪ್ರಕಾರ 6,7,8 ಮತ್ತು 9 ರಾಡ್ ಜೊತೆ ಗಂಟೆಯಿರುವ ಗಾಳಿ ಗಂಟೆಯನ್ನು ಹಾಕಬೇಕು. ಇದ್ರಿಂದ ಮನೆಯಲ್ಲಿ ಎಂದೂ ಹಣದ ಸಮಸ್ಯೆ ಎದುರಾಗುವುದಿಲ್ಲ.
7 ಮತ್ತು 8 ರಾಡ್ ಇರುವ ಗಾಳಿಗಂಟೆ ಹಾಕುವುದರಿಂದ ಮನೆಗೆ ಸಂಪತ್ತು ಬರಲಿದೆ.
ಐದು ರಾಡ್ ಇರುವ ಗಾಳಿಗಂಟೆ ಮನೆಗೆ ನಕಾರಾತ್ಮಕ ಶಕ್ತಿ ಪ್ರವೇಶಕ್ಕೆ ಕಾರಣವಾಗುತ್ತದೆ.