ಪ್ರಾಚೀನ ಕಾಲದಿಂದಲೂ ಮನೆಗಳಲ್ಲಿ ಪಶು-ಪಕ್ಷಿಗಳನ್ನು ಸಾಕುವ ಪದ್ಧತಿ ರೂಢಿಯಲ್ಲಿದೆ. ಪಶು-ಪಕ್ಷಿ ಪ್ರಿಯರು ತಮಗಿಷ್ಟವಾದ ಪ್ರಾಣಿಗಳನ್ನು ಮನೆಯಲ್ಲಿ ಸಾಕಿಕೊಳ್ತಾರೆ. ಮನುಷ್ಯ ವಾಸಿಸುವ ಮನೆಯಲ್ಲಿ ಹೇಗೆ ನಕಾರಾತ್ಮಕ ಹಾಗೂ ಸಕಾರಾತ್ಮಕ ಶಕ್ತಿ ಇರುತ್ತದೆಯೋ ಅದೇ ರೀತಿ ಪಶು-ಪಕ್ಷಿಗಳು ಕೂಡ ಶುಭ-ಅಶುಭ ಫಲಗಳಿಗೆ ಕಾರಣವಾಗುತ್ತವೆ.
ಈಗಿನ ಕಾಲದಲ್ಲಿ ಜನರು ವಾಸ್ತು ಶಾಸ್ತ್ರದ ಜೊತೆಗೆ ಫೆಂಗ್ ಶೂಯಿ ಶಾಸ್ತ್ರವನ್ನು ನಂಬುತ್ತಿದ್ದಾರೆ. ಫೆಂಗ್ ಶೂಯಿಯಲ್ಲಿ ಮನೆಯಲ್ಲಿ ಸಾಕುವ ಪ್ರಾಣಿ – ಪಕ್ಷಿಗಳು ಯಾವ ಬಣ್ಣದ್ದಿರಬೇಕೆಂದು ಹೇಳಲಾಗಿದೆ. ಫೆಂಗ್ ಶೂಯಿ ಪ್ರಕಾರ ಮನೆಯಲ್ಲಿ 8-9 ಕಿತ್ತಳೆ ಬಣ್ಣದ ಮೀನಿನ ಜೊತೆ ಒಂದು ಕಪ್ಪು ಬಣ್ಣದ ಮೀನಿರಬೇಕಂತೆ.
ಬಂಗಾರದ ಬಣ್ಣದ ಮೀನನ್ನೂ ಶುಭವೆಂದು ಹೇಳಲಾಗಿದೆ. ಕೆಂಪು ಹಾಗೂ ಕಪ್ಪು ಬಣ್ಣದ ಮೀನುಗಳು ಒಟ್ಟಿಗಿದ್ದರೆ ಸಮೃದ್ಧಿಗೆ ಬರವಿರೋದಿಲ್ಲ.
ಅಕ್ವೇರಿಯಂನಲ್ಲಿರುವ ಮೀನಿನ ಸಂಖ್ಯೆ ಒಂಭತ್ತಿರಬೇಕು. ಚಿನ್ನದ ಬಣ್ಣದ ಮೀನಿದ್ದರೆ ಸಂತೋಷ ಹಾಗೂ ಶಾಂತಿಯ ಸಂಕೇತ.
ಬಹುತೇಕರ ಮನೆಯಲ್ಲಿ ನಾಯಿ ಸಾಕುತ್ತಾರೆ. ನಾಯಿಯನ್ನು ಹಿಂದೂ ಧರ್ಮದಲ್ಲಿ ದೇವರಿಗೆ ಹೋಲಿಸಲಾಗಿದೆ. ನಾಯಿಯನ್ನು ಪ್ರಾಮಾಣಿಕತೆಗೂ ಹೋಲಿಸಲಾಗುತ್ತದೆ. ಶಾಸ್ತ್ರದ ಪ್ರಕಾರ ಕಪ್ಪು ಬಣ್ಣದ ನಾಯಿ ಧನವೃದ್ಧಿಗೆ ಕಾರಣವಾಗುತ್ತದೆಯಂತೆ.
ಮಳೆಗಾಲದ ಸಮಯದಲ್ಲಿ ಮನೆಯ ಹೊರಗೆ ಕಪ್ಪೆಗಳು ಕಾಣಿಸಿಕೊಳ್ಳುತ್ತವೆ. ಅವುಗಳನ್ನು ಸಾಕುವವರು ಯಾರೂ ಇಲ್ಲ. ಆದ್ರೆ ಕಪ್ಪೆ ದೇವರ ರೂಪವಾಗಿದ್ದು ಅದು ಮನೆಯಲ್ಲಿದ್ದರೆ ಲಕ್ಷ್ಮಿ ವಾಸಿಸುತ್ತಾಳೆಂಬ ನಂಬಿಕೆ ಇದೆ.
ಅನೇಕರ ಮನೆಯಲ್ಲಿ ಬೆಕ್ಕನ್ನು ಸಾಕುತ್ತಾರೆ. ಆದ್ರೆ ಪುರಾಣಗಳ ಪ್ರಕಾರ ಪದೇ ಪದೇ ಮನೆಗೆ ಬೆಕ್ಕು ಬರೋದು ಅಶುಭ.
ಐಶ್ವರ್ಯ ಹಾಗೂ ಶಾಂತಿಗಾಗಿ ಮನೆಯಲ್ಲಿ ಕುದುರೆ ಸಾಕಬೇಕು. ಒಂದು ವೇಳೆ ಇದು ಸಾಧ್ಯವಾಗದೆ ಹೋದಲ್ಲಿ ಕುದುರೆ ಪ್ರತಿಮೆಯನ್ನು ಮನೆಯಲ್ಲಿ ಇಡಬಹುದು.
ಮನೆಯಲ್ಲಿ ಕುದುರೆ ಸಾಕಿದ್ರೆ ಸುಖ-ಸಮೃದ್ಧಿ ಬರಲಿದೆ ಎಂದು ಚೀನಾ ಜನರು ನಂಬಿದ್ದಾರೆ.
ಮೊಲ ಸಾಕಣೆ ಮಕ್ಕಳಿಗೆ ಶುಭವೆಂದು ಪರಿಗಣಿಸಲಾಗಿದೆ.
ಚೇಳು, ಹೆಬ್ಬಾವು ಹಾಗೂ ಬಾವಲಿಗಳು ಮನೆಯಲ್ಲಿರುವುದು ಅಶುಭ.