ಜಾಗಿಂಗ್ ಹಾಗೂ ರನ್ನಿಂಗ್ ಒಳ್ಳೆಯ ಅಭ್ಯಾಸ. ವ್ಯಾಯಾಮದ ಜೊತೆಗೆ ನಿಯಮಿತವಾಗಿ ರನ್ನಿಂಗ್ ಮಾಡಿದ್ರೆ ದೇಹ ಆರೋಗ್ಯಕರವಾಗಿರುತ್ತದೆ. ಜಾಗಿಂಗ್ ಹಾಗೂ ರನ್ನಿಂಗ್ ನಿಂದ ಸಾಕಷ್ಟು ಲಾಭಗಳಿವೆ. ಆದ್ರೆ ಸೂಕ್ತ ರೀತಿಯಲ್ಲಿ ರನ್ನಿಂಗ್ ಮಾಡದಿದ್ದಲ್ಲಿ ಲಾಭದ ಬದಲು ನಷ್ಟ ಅನುಭವಿಸಬೇಕಾಗುತ್ತದೆ.
ರನ್ನಿಂಗ್ ಮಾಡುವ ಮೊದಲು ಅತಿಯಾಗಿ ಆಹಾರ ಸೇವನೆ ಬೇಡ. ರನ್ನಿಂಗ್ ವೇಳೆ ಜೀರ್ಣಕ್ರಿಯೆ ನಿಧಾನವಾಗಿ ಆಗುತ್ತದೆ. ಇದ್ರಿಂದ ಸಮಸ್ಯೆ ಶುರುವಾಗುತ್ತೆ.
ರನ್ನಿಂಗ್ ಗೆ ಮೊದಲು ಒಂದು ಲೀಟರ್ ನೀರು ಕುಡಿಯುವುದು ಒಳ್ಳೆಯದಲ್ಲ. ಹಾಗಂತ ನೀರು ಕುಡಿಯದೇ ರನ್ನಿಂಗ್ ಮಾಡುವುದೂ ಒಳ್ಳೆಯದಲ್ಲ. ಸ್ವಲ್ಪ ನೀರು ಕುಡಿದು ರನ್ನಿಂಗ್ ಶುರು ಮಾಡಿ.
ಶೌಚಾಲಯಕ್ಕೆ ಹೋಗದೇ ಅನೇಕರು ರನ್ನಿಂಗ್ ಮಾಡ್ತಾರೆ. ಇದ್ರಿಂದ ಕಿರಿಕಿರಿ ಅನುಭವಿಸಬೇಕಾಗುತ್ತದೆ. ಹಾಗಾಗಿ ರನ್ನಿಂಗ್ ಮಾಡುವ ಮೊದಲು ಶೌಚಾಲಯಕ್ಕೆ ಹೋಗಿ ಬನ್ನಿ.
ರನ್ನಿಂಗ್ ಹವ್ಯಾಸವಿರುವವರು ದೇಹದ ಮಾತನ್ನು ಕೇಳಬೇಕಾಗುತ್ತೆ. ದೇಹ ದಣಿದಿದ್ದರೂ ಬಲವಂತವಾಗಿ ಓಡುವುದು ಒಳ್ಳೆಯದಲ್ಲ. ದೇಹದ ಮಾತು ಕೇಳದಿದ್ದರೆ ಬೇಗ ನೀವು ಸುಸ್ತಾಗುತ್ತೀರಿ. ದೇಹದ ಭಾಗಗಳಲ್ಲಿ ನೋವು ಕಾಣಿಸಿಕೊಳ್ಳುವ ಸಾಧ್ಯತೆಯೂ ಇದೆ.