ಮದುವೆ ಜೀವನದಲ್ಲಾಗುವ ದೊಡ್ಡ ಬದಲಾವಣೆ. ಮದುವೆ ನಂತ್ರ ಜೀವನ ಸುಖಕರವಾಗಿರಬೇಕೆಂದು ಎಲ್ಲರೂ ಬಯಸ್ತಾರೆ. ಆದ್ರೆ ಮದುವೆ ನಂತ್ರ ಕೆಲವರ ಬಾಳು ಗೋಳಾಗುತ್ತದೆ. ದಾಂಪತ್ಯ ಸದಾ ಸಂತೋಷದಿಂದ ಇರಬೇಕೆಂದ್ರೆ ಕೆಲ ವಿಷ್ಯಗಳನ್ನು ಗಮನಿಸಿ ನಂತ್ರ ಮದುವೆಯಾಗ್ಬೇಕು ಎಂದು ಶಾಸ್ತ್ರಗಳಲ್ಲಿ ಹೇಳಲಾಗಿದೆ. ಗರುಡ ಪುರಾಣ, ವಿಷ್ಣು ಪುರಾಣ ಸೇರಿದಂತೆ ಅನೇಕ ಪುರಾಣಗಳಲ್ಲೂ ಈ ಬಗ್ಗೆ ಉಲ್ಲೇಖ ಮಾಡಲಾಗಿದೆ. ಮಹಿಳೆಯರು ದೇಹದ ಕೆಲ ಭಾಗಗಳು ಅವರ ಸ್ವಭಾವವನ್ನು ಹೇಳುತ್ತವೆ. ಅವುಗಳನ್ನು ಗಮನಿಸಿ ಮದುವೆಯಾದ್ರೆ ದಾಂಪತ್ಯದಲ್ಲಿ ಯಾವುದೇ ಸಮಸ್ಯೆ ಕಾಡುವುದಿಲ್ಲ.
ಮಹಿಳೆಯ ಕುತ್ತಿಗೆ ನಾಲ್ಕು ಬೆರಳುಗಳಷ್ಟು ಉದ್ದವಿದ್ದರೆ ಅಂತಹ ಮಹಿಳೆಯನ್ನು ಅದೃಷ್ಟ ಎಂದು ಪರಿಗಣಿಸಲಾಗುತ್ತದೆ. ಆ ಮಹಿಳೆಯಲ್ಲಿ ಬೆಳ್ಳಿ ಹಾಗೂ ಬಂಗಾರ ಹೆಚ್ಚಿರುತ್ತದೆ ಎಂದು ನಂಬಲಾಗಿದೆ.
ಮಹಿಳೆಯ ಕುತ್ತಿಗೆಯ ಮೇಲೆ ಮೂರು ಗೆರೆಗಳು ಮೂಡುತ್ತಿದ್ದರೆ ಅದನ್ನು ಮಂಗಳಕರವೆಂದು ಪರಿಗಣಿಸಲಾಗುತ್ತದೆ. ಹಾಗೆ ಸುಂದರವಾದ, ದುಂಡಗಿನ ಕತ್ತು ಹೊಂದಿರುವ ಮಹಿಳೆ ಕೂಡ ಅದೃಷ್ಟ ತರುತ್ತಾಳೆ ಎಂದು ನಂಬಲಾಗಿದೆ.
ಸುಂದರ, ಕಾಂತಿಯುತ, ಬೆಳ್ಳಗಿರುವ ಮತ್ತು ಮುಂದಕ್ಕೆ ಚಾಚಿಕೊಂಡಿರುವ ಹಲ್ಲುಗಳಿರುವ ಮಹಿಳೆ ಶುಭ ಫಲ ತರುತ್ತಾಳೆಂದು ಪುರಾಣದಲ್ಲಿ ಹೇಳಲಾಗಿದೆ. ಮಹಿಳೆ ಹಲ್ಲುಗಳು ತುಂಬಾ ತೆಳ್ಳಗಿದ್ದರೆ ಅಥವಾ ಚಿಕ್ಕದಾಗಿದ್ದರೆ ಅದನ್ನು ಅಶುಭವೆನ್ನಲಾಗುತ್ತದೆ.
ನಾಲಿಗೆ ಉದ್ದವಾಗಿದ್ದು, ನೇರ ಮತ್ತು ತೆಳ್ಳಗಿದ್ದರೆ, ಕೆಂಪು ಬಣ್ಣದ್ದಾಗಿದ್ದರೆ ಅದನ್ನು ಶುಭ ಎನ್ನಲಾಗುತ್ತದೆ.
ನಗುವಾಗ ಹಲ್ಲು ಕಾಣಿಸದಿದ್ದರೆ ಮತ್ತು ಕೆನ್ನೆ ಊದಿಕೊಂಡರೆ ಮತ್ತು ಕಣ್ಣು ಮುಚ್ಚದಿದ್ದರೆ ಅದು ತುಂಬಾ ಶುಭ ಸಂಕೇತವಾಗಿದೆ. ನಗುವಾಗ ಕೆನ್ನೆಯ ಮೇಲೆ ಗುಳಿ ಬಿದ್ದರೆ ಅದನ್ನು ಒಳ್ಳೆಯದು ಎಂದು ಪರಿಗಣಿಸಲಾಗುತ್ತದೆ.
ಹಸ್ತಸಾಮುದ್ರಿಕ ಶಾಸ್ತ್ರದ ಪ್ರಕಾರ, ಮಹಿಳೆ ಗಲ್ಲ ದುಂಡಗೆ ಮೃದುವಾಗಿದ್ದರೆ ಆಕೆ ಅದೃಷ್ಟ ತರುತ್ತಾಳೆ ಎಂದು ಹೇಳಲಾಗಿದೆ.
ಎಲ್ಲಾ ಕಡೆಯಿಂದ ದುಂಡಾಗಿರುವ ಮತ್ತು ಸ್ವಲ್ಪ ಹಳದಿ ಬಣ್ಣವನ್ನು ಹೊಂದಿರುವ ಹುಡುಗಿ ಮದುವೆಯಾದ್ರೆ ಒಳ್ಳೆಯದು ಎನ್ನುತ್ತದೆ ಶಾಸ್ತ್ರ. ಮಹಿಳೆಯ ಕೆನ್ನೆ ಒರಟಾಗಿದ್ದರೆ ಮತ್ತು ತೆಳ್ಳಗಿದ್ದರೆ ಅದನ್ನು ಮಂಗಳಕರವೆಂದು ಪರಿಗಣಿಸಲಾಗುವುದಿಲ್ಲ.