ಬೆಂಗಳೂರು: ತನ್ನ ಉತ್ಕೃಷ್ಟ ಗುಣಮಟ್ಟ ಮತ್ತು ರುಚಿಗೆ ಹೆಸರುವಾಸಿಯಾಗಿರುವ ನಾಡಿನ ಹೆಮ್ಮೆಯ ಸಂಸ್ಥೆ ಕೆಎಂಎಫ್ ನಂದಿನಿ ಈಗ ವೇ ಪ್ರೋಟೀನ್ಯುಕ್ತ ಇಡ್ಲಿ ಹಾಗೂ ದೋಸೆ ಹಿಟ್ಟಿನ ಉತ್ಪನ್ನವನ್ನು ಮಾರುಕಟ್ಟೆಗೆ ಬಿಡುಗಡೆಗೊಳಿಸಿದೆ.
ಬದಲಾದ ಜೀವನಶೈಲಿಯಿಂದಾಗಿ ನಗರ ಪ್ರದೇಶಗಳ ಜನರು ಹೆಚ್ಚೆಚ್ಚು ಸಿದ್ಧಪಡಿಸಲಾದ ಆಹಾರ ಉತ್ಪನ್ನಗಳ ಮೊರೆ ಹೋಗುತ್ತಿರುವುದನ್ನು ಮನಗಂಡು, ಆರೋಗ್ಯಕರವಾದ ಹಾಗೂ ರುಚಿಕರವಾದ ಇಡ್ಲಿ ಮತ್ತು ದೋಸೆಹಿಟ್ಟನ್ನು ಗ್ರಾಹಕರಿಗೆ ಒದಗಿಸಲು ನಿರ್ಧರಿಸಿ, ಈ ನೂತನ ಉತ್ಪನ್ನವನ್ನು ಪರಿಚಯಿಸಲಾಗುತ್ತಿದೆ.
ಬೆಂಗಳೂರು ನಗರದಲ್ಲಿ ಪ್ರಾಯೋಗಿಕವಾಗಿ ನಂದಿನಿ ಬ್ರ್ಯಾಂಡ್ನ ಇಡ್ಲಿ / ದೋಸೆ ಹಿಟ್ಟನ್ನು ಎರಡು ವಿಧದ ಪ್ಯಾಕ್ಗಳಲ್ಲಿ ಅಂದರೆ 450 ಗ್ರಾಂ.ಗೆ ₹40 ಹಾಗೂ 900 ಗ್ರಾಂ.ಗೆ ₹80 ರಂತೆ ಮಾರಾಟ ದರ ನಿಗದಿಪಡಿಸಿ ಮಾರುಕಟ್ಟೆಗೆ ಬಿಡುಗಡೆ ಮಾಡಲಾಗಿದೆ.