ಕೇರಳದ ಪಾಲಕ್ಕಾಡ್ ಒಟ್ಟಪ್ಪಲಂನಲ್ಲಿ ರಸ್ತೆ ಬದಿ ನಿಲ್ಲಿಸಿದ್ದ ಕಾರನ್ನು ಮಕ್ಕಳು ಸ್ಟಾರ್ಟ್ ಮಾಡಿದ ಪರಿಣಾಮ ಅದು ಮುಂದಕ್ಕೆ ಚಲಿಸಿ ಅಪಘಾತ ಸಂಭವಿಸಿದೆ. ಕಾರು ಮುಂದೆ ಸಾಗುತ್ತಿದ್ದಂತೆ ಎದುರಿನ ಲೇನ್‌ಗೆ ಪಲ್ಟಿಯಾಗಿ ಗೋಡೆಗೆ ಡಿಕ್ಕಿ ಹೊಡೆದು ನಿಂತಿದೆ. ಅದೃಷ್ಟವಶಾತ್, ಯಾವುದೇ ಇತರ ವಾಹನಗಳು ದಾರಿಯಲ್ಲಿ ಇರದ ಕಾರಣ ದೊಡ್ಡ ಅನಾಹುತ ತಪ್ಪಿದೆ. ಕಾರು ಗೋಡೆಗೆ ಅಪ್ಪಳಿಸಿದ ಪರಿಣಾಮ ಗಂಭೀರವಾದ ಅಪಘಾತ ತಪ್ಪಲು ಸಹಾಯ ಮಾಡಿತು.
ಅಪಘಾತದ ಸಿಸಿಟಿವಿ ದೃಶ್ಯಾವಳಿಗಳು ಬಿಡುಗಡೆಯಾದ ನಂತರ, ಪೊಲೀಸರು ಮತ್ತು ಮೋಟಾರು ವಾಹನ ಇಲಾಖೆ ತನಿಖೆ ಆರಂಭಿಸಿದೆ. ಕಾರಿನ ಮಾಲೀಕತ್ವ ಮತ್ತು ಘಟನೆಗೆ ಕಾರಣವಾದ ಸಂದರ್ಭಗಳನ್ನು ನಿರ್ಧರಿಸಲು ಅಧಿಕಾರಿಗಳು ಕೆಲಸ ಮಾಡುತ್ತಿದ್ದಾರೆ. ಈಸ್ಟ್ ಒಟ್ಟಪ್ಪಲಂನಲ್ಲಿ ಈ ಘಟನೆ ನಡೆದಿದೆ. ಸಿಸಿಟಿವಿ ದೃಶ್ಯಾವಳಿಗಳಲ್ಲಿ ಚಾಲಕನು ನಿಲುಗಡೆ ಮಾಡಿದ ಕಾರಿನಿಂದ ಹೊರಬಂದು ಅಪಘಾತದ ಕ್ಷಣಗಳ ಮೊದಲು ಇನ್ನೊಬ್ಬ ವ್ಯಕ್ತಿಯೊಂದಿಗೆ ಸಂಭಾಷಣೆಯಲ್ಲಿ ತೊಡಗಿರುವುದು ಕಂಡು ಬರುತ್ತದೆ.
ಶಾಪಿಂಗ್ ಮುಗಿಸಿ ಇತರ ಕುಟುಂಬ ಸದಸ್ಯರು ವಾಪಸಾಗುವುದನ್ನು ಚಾಲಕ ಕಾಯುತ್ತಿದ್ದಾಗ ಅಪಘಾತ ಸಂಭವಿಸಿದೆ. ಸರಕುಗಳನ್ನು ಖರೀದಿಸಿದ ನಂತರ ಇಬ್ಬರು ಮಹಿಳೆಯರು ಕಾರಿನ ಬಳಿಗೆ ಬಂದು ಒಳಗಿದ್ದ ಮಕ್ಕಳೊಂದಿಗೆ ಮಾತನಾಡಲು ಪ್ರಾರಂಭಿಸಿದಾಗ ಚಾಲಕ ಇನ್ನೊಬ್ಬ ವ್ಯಕ್ತಿಯೊಂದಿಗೆ ಮಾತನಾಡುತ್ತಿರುತ್ತಾರೆ. ಇದ್ದಕ್ಕಿದ್ದಂತೆ ಕಾರು ಮುಂದೆ ಸಾಗತೊಡಗಿದ್ದು, ಮಾಲೀಕ ಡೋರ್ ತೆರೆದು ವಾಹನ ನಿಲ್ಲಿಸಲು ಯತ್ನಿಸಿದರಾದರೂ ಎಷ್ಟೇ ಪ್ರಯತ್ನಪಟ್ಟರೂ ಕಾರು ನಿಯಂತ್ರಣಕ್ಕೆ ಬಾರದೆ ರಸ್ತೆ ಮಧ್ಯೆ ಬಿದ್ದಿದ್ದಾರೆ.
ಇದರ ಬೆನ್ನಲ್ಲೇ ಕಾರು ಮುಂದೆ ಸಾಗಿ ಗೋಡೆಗೆ ಡಿಕ್ಕಿ ಹೊಡೆದಿದೆ. ಕಾರು ಮುನ್ನಡೆಯುವ ಕೆಲವೇ ಸೆಕೆಂಡುಗಳ ಮೊದಲು, ಬಸ್ಸುಗಳು, ಇತರ ಕಾರುಗಳು ಮತ್ತು ಬೈಕುಗಳು ಎರಡೂ ದಿಕ್ಕುಗಳಿಂದ ಹಾದುಹೋಗಿದ್ದು ಈ ವಾಹನಗಳಿಗೆ ಡಿಕ್ಕಿಯಾಗಿದ್ದರೆ ಭಾರಿ ಅನಾಹುತ ಸಂಭವಿಸುವ ಸಾಧ್ಯತೆ ಇತ್ತು. ನಿಖರವಾಗಿ ಏನಾಯಿತು ಎಂಬುದನ್ನು ನಿರ್ಧರಿಸಲು ತನಿಖೆ ನಡೆಯುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ ಮತ್ತು ಯಾವುದೇ ಕಾನೂನು ಉಲ್ಲಂಘನೆ ಕಂಡುಬಂದರೆ ಸೂಕ್ತ ಕ್ರಮ ತೆಗೆದುಕೊಳ್ಳಲಾಗುವುದು ಎಂದು ತಿಳಿಸಿದ್ದಾರೆ.
ಘಟನೆಯ ಸಂಪೂರ್ಣ ದೃಶ್ಯಾವಳಿ ಸಿಸಿ ಟಿವಿಯಲ್ಲಿ ಸೆರೆಯಾಗಿದ್ದು, ಹತ್ತಿರದ ಅಂಗಡಿಯ ಮಾಲೀಕರು ಬಿಡುಗಡೆ ಮಾಡಿದ್ದಾರೆ. ಈ ದೃಶ್ಯಾವಳಿ ಆಧರಿಸಿ ಪೊಲೀಸರು ತನಿಖೆ ಆರಂಭಿಸಿದ್ದಾರೆ.