ತಿರುವನಂತಪುರಂ: ಡೆಂಗ್ಯೂ ಅಟ್ಟಹಾಸದ ಬೆನ್ನಲ್ಲೇ ನಿಫಾ ವೈರಸ್ ಗೆ ಕೇರಳದಲ್ಲಿ ಮೊದಲ ಬಲಿಯಾಗಿದೆ. ಕೇರಳದಲ್ಲಿ 14 ವರ್ಷದ ಬಾಲಕ ನಿಫಾ ಸೋಂಕಿನಿಂದ ಮೃತಪಟ್ಟಿದ್ದಾನೆ.
ಕೇರಳದ ಮಲಪ್ಪುರಂನಲ್ಲಿ 14 ವರ್ಷದ ಬಾಲಕನಿಗೆ ನಿಫಾ ವೈರಸ್ ದೃಢಪಟ್ಟಿತ್ತು. ಬಾಲಕನನ್ನು ಕೊಝಿಕ್ಕೋಡ್ ಆಸ್ಪತೆಗೆ ದಾಖಲಿಸಲಾಗಿತ್ತು. ವೆಂಟಿಲೇಟರ್ ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಬಾಲಕ ಚಿಕಿತ್ಸೆ ಫಲಿಸದೇ ಸಾವನ್ನಪ್ಪಿದ್ದಾನೆ ಎಂದು ತಿಳಿದುಬಂದಿದೆ.
ಇನ್ನೂ ಮೂವರು ಶಂಕಿತ ನಿಫಾ ವೈರಸ್ ಸೋಂಕಿತರಿಗೆ ಕೊಝಿಕ್ಕೋಡ್ ಆಸ್ಪತ್ತೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ನಿಫಾ ವೈರಸ್ ಕೇರಳದಲ್ಲಿ ಮೊದಲ ಬಲಿ ಪಡೆದಿದ್ದು, ಕರ್ನಾಟಕದಲ್ಲಿಯೂ ಆತಂಕ ಹೆಚ್ಚಿಸಿದೆ.
ಕರ್ನಾಟಕದಲ್ಲಿ ಈಗಾಗಲೇ ಡೆಂಗ್ಯೂ ಸೋಂಕು ಅಟ್ಟಹಾಸ ಮೆರೆಯುತ್ತಿದ್ದು, ಹಲವರು ಸಾವನ್ನಪ್ಪಿದ್ದಾರೆ. ಇದರ ಬೆನ್ನಲ್ಲೇ ಪಕ್ಕದ ರಾಜ್ಯ ಕೇರಳದಲ್ಲಿ ನಿಫಾ ವೈರಸ್ ಉಲಬಣಗೊಳ್ಳುತ್ತಿದ್ದು, ಆತಂಕಕ್ಕೆ ಕಾರಣವಾಗಿದೆ.