ಸಾಂಕ್ರಾಮಿಕ ರೋಗ ಕೊರೋನಾದಿಂದಾಗಿ, ವಿದೇಶದಲ್ಲಿರುವ ಬಹಳಷ್ಟು ಜನರು ತಮ್ಮ ತಾಯ್ನಾಡಿಗೆ ಹಿಂತಿರುಗಲು ಸಾಧ್ಯವಾಗಲಿಲ್ಲ. ಹೀಗಾಗಿ ಬಹಳ ಸಮಯದವರೆಗೆ ಕುಟುಂಬ ಮತ್ತು ಸ್ನೇಹಿತರಿಂದ ದೂರ ಉಳಿಯಬೇಕಾಯಿತು. ಇದೀಗ ಒಂದು ಸುಂದರ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ.
ಐದು ವರ್ಷಗಳ ನಂತರ ಸ್ವಿಟ್ಜರ್ಲೆಂಡ್‌ನಿಂದ ಹಿಂದಿರುಗಿದ ರೋಜನ್ ಪರಂಬಿಲ್ ಎಂಬ ಕೇರಳದ ವ್ಯಕ್ತಿಯೊಬ್ಬರು ತನ್ನ ತಾಯಿಯನ್ನು ಪ್ರವಾಸಕ್ಕೆ ಕರೆದೊಯ್ಯಲು ನಿರ್ಧರಿಸಿದ್ರು. ಆಕೆಗೆ ಸ್ನಾನ ಮಾಡಿಸಿ ಸಿದ್ಧಗೊಳಿಸಿದರು. ನಂತರ, ಅವರು ತಮ್ಮ ತಾಯಿಯನ್ನು ತನ್ನ ಭುಜದ ಮೇಲೆ ಎತ್ತಿ ರಸ್ತೆ ಪ್ರವಾಸಕ್ಕೆ ಕರೆದೊಯ್ದರು. ಹ್ಯೂಮನ್ಸ್ ಆಫ್ ಕೇರಳದ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಈ ವಿಡಿಯೋವನ್ನು ಹಂಚಿಕೊಳ್ಳಲಾಗಿದೆ.
ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿರುವ ವಿಡಿಯೋದಲ್ಲಿ, ವ್ಯಕ್ತಿಯೊಬ್ಬರು ತನ್ನ ವೃದ್ಧ ತಾಯಿಯನ್ನು ತನ್ನ ಭುಜದ ಮೇಲೆ ಎತ್ತಿ ಕಾರಿನಲ್ಲಿ ಕೂರಿಸಿದ್ದಾರೆ. ಬಳಿಕ ಚಹಾ ಹೀರಿದ್ದಾರೆ. ತಾಯಿ ಪ್ರವಾಸವನ್ನು ಆನಂದಿಸಿದಂತಿದೆ. ಪ್ರವಾಸದ ವೇಳೆ ತಾಯಿ-ಮಗ ಇಬ್ಬರೂ ಚಿತ್ರಗಳನ್ನು ಕ್ಲಿಕ್ಕಿಸಿದರು.
ಕೆಲವು ವರ್ಷಗಳ ಹಿಂದೆ, ನಾನು ತಾಯಿಯನ್ನು ಸ್ವಿಟ್ಜರ್ಲೆಂಡ್‌ಗೆ ಕರೆದೊಯ್ದು ಯುರೋಪ್ ಅನ್ನು ತೋರಿಸಿದೆ. ಅವಳು ಹೊಸ ಸ್ಥಳಗಳನ್ನು ನೋಡಿ ಸಂತೋಷಪಟ್ಟಳು. ಆದರೆ, ಕೋವಿಡ್‌ನಿಂದಾಗಿ ಸುಮಾರು 5 ವರ್ಷಗಳ ನಂತರ ನಾನು ಭಾರತಕ್ಕೆ ಹೋಗಲು ಸಾಧ್ಯವಾಯಿತು. ತಾಯಿಯನ್ನು ನೋಡಿ ನನ್ನ ಹೃದಯ ಛಿದ್ರವಾಯಿತು. ಅವಳು ತುಂಬಾ ದುರ್ಬಲವಾಗಿದ್ದಳು. ಅವಳು ಸರಿಯಾಗಿ ನಿಲ್ಲಲು ಅಥವಾ ನಡೆಯಲು ಸಾಧ್ಯವಾಗಲಿಲ್ಲ. ಅವಳು ವರ್ಷಗಳಿಂದ ಚರ್ಚ್‌ಗೆ ಹೋಗಿಲ್ಲ ಎಂದು ಹೇಳಿದ್ದಕ್ಕೆ ನಾನು ಅವಳನ್ನು ಹೊರಗೆ ಕರೆದೊಯ್ಯಲು ನಿರ್ಧರಿಸಿದೆ ಎಂದು ಪರಂಬಿಲ್ ಬರೆದಿದ್ದಾರೆ.
ನಾನು ಸ್ವಿಟ್ಜರ್ಲೆಂಡ್‌ನ ವೃದ್ಧಾಶ್ರಮದಲ್ಲಿ ಕೆಲಸ ಮಾಡುತ್ತಿದ್ದೇನೆ. ಹೀಗಾಗಿ, ಆ ಅನುಭವದೊಂದಿಗೆ ನಾನು ಅವಳನ್ನು ಸ್ನಾನ ಮಾಡಿಸಿ, ನನ್ನ ಸಹೋದರಿಯರ ಮೂಲಕ ಅವಳಿಗೆ ಬಟ್ಟೆ ತೊಡಿಸುವಂತೆ ಮಾಡಿದೆ. ಅವಳನ್ನು ನನ್ನ ಕಾರಿನಲ್ಲಿ ಕರೆದೊಯ್ಯಲು ನಿರ್ಧರಿಸಿದೆ. ನಾನು ಅವಳನ್ನು ನನ್ನ ಹೆಗಲ ಮೇಲೆ ಎತ್ತಿ ಕಾರಿನಲ್ಲಿ ಕೂರಿಸಿದೆ. ನಾವು ಸುಮಾರು 20 ಕಿ.ಮೀ ದೂರದ ಅವಳ ಊರಾದ ಅತಿರುಂಪುಳಕ್ಕೆ ಹೋದೆವು. ಅವಳು ಅನೇಕ ಸ್ಥಳಗಳನ್ನು ನೆನಪಿಸಿಕೊಳ್ಳಲಾಗದಿದ್ದರೂ ಆಕೆಯನ್ನು ಸಂತೋಷಪಡಿಸಿತು ಎಂದು ಹೇಳಿದ್ರು.
ಅಮ್ಮ ಎಂದೂ ಭರಿಸಲಾಗದ ಸಂಪತ್ತು. ನೀವು ಅವರೊಂದಿಗೆ ಇರುವ ಪ್ರತಿ ಕ್ಷಣವನ್ನು ಸಹ ಪಾಲಿಸಬೇಕು. ನೆನಪುಗಳು ಮಾತ್ರ ಉಳಿಯುತ್ತವೆ. ನೀವು ಅವಳನ್ನು ಪ್ರವಾಸ ಕರೆದೊಯ್ದಿರುವುದು ಅದ್ಭುತವಾಗಿದೆ ಎಂದು ಬಳಕೆದಾರರು ಬರೆದಿದ್ದಾರೆ.