ತಿರುವನಂತಪುರಂ: ವಿವರ ಭರ್ತಿ ಮಾಡದಿದ್ದರೂ ಸ್ವ ಇಚ್ಚೆಯಿಂದ ಸಹಿ ಹಾಕಿದ ಚೆಕ್ ವರ್ಗಾವಣೆ ಕಾಯ್ದೆ 1881 ಸೆಕ್ಷನ್ 138ರ ಅನ್ವಯ ಹೊಣೆಗಾಕೆಯನ್ನು ಹೊಂದಿದೆ ಎಂದು ಕೇರಳ ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ.
ವಿಬಿನ್ ಮೆಲೆಪುರಂ, ಡೆನ್ನಿ ಥೋಮಸ್ ಅವರ ಪ್ರಕರಣದ ಅರ್ಜಿ ವಿಚಾರಣೆ ನಡೆಸಿದ ಕೇರಳ ಹೈಕೋರ್ಟ್ ನ ನ್ಯಾ.ಪಿ.ಜಿ.ಅಜಿತ್ ಕುಮಾರ್ ಅವರಿದ್ದ ಪೀಠ, ಚೆಕ್ ನ ಇತರ ಕಾಲಂಗಳನ್ನು ಭರ್ತಿ ಮಾಡದಿದ್ದರೂ ಆ ಚೆಕ್ ಗೆ ಸ್ವ ಇಚ್ಛೆಯಿಂದ ಸಹಿ ಹಾಕಿದ್ದರೆ ಅಂತಹ ಚೆಕ್ ಹೊಣೆಗಾರಿಕೆಯನ್ನು ಹೊಂದಿದೆ ಎಂದು ತಿಳಿಸಿದೆ.
ತಮ್ಮ ಸಹಿ ಇರುವ ಚೆಕ್ ನ್ನು ಸ್ವ ಇಚ್ಛೆಯಿಂದ ಆರೋಪಿ ನೀಡಿದ್ದು, ಅದು ಅಮಾನ್ಯಗೊಂಡಿದ್ದರೆ ಮಾತ್ರ ಅದು ಸೆಕ್ಷ 138ರ ಅಡಿ ಶಿಕ್ಷಾರ್ಹ ಅಪರಾಧ ಎಂದು ನ್ಯಾಯಪೀಠ ಸ್ಪಷ್ಟಪಡಿಸಿದೆ.
ಚೆಕ್ ಗೆ ಸಹಿ ಹಾಕುವ ಹಾಗೂ ಅದನ್ನು ಪಾವತಿಸುವವರಿಗೆ ಒಪ್ಪಿಸುವ ವ್ಯಕ್ತಿ ಋಣಭಾರವನ್ನು ಹೊಣೆಗಾರಿಕೆಯ ಮರುಪಾವತಿಗಾಗಿ ಚೆಕ್ ನ್ನು ನೀಡಲಾಗಿದೆ ಎಂಬ ಊಹೆಯನ್ನು ನಿರಾಕರಿಸಲು ಪುರಾವೆಗಳನ್ನು ಸಲ್ಲಿಸದ ಹೊರತು ಚೆಕ್ ನೀಡಿದಾತನೇ ಜವಾಬ್ದಾರನಾಗಿರುತ್ತಾನೆ. ಚೆಕ್ ಗೆ ಇಚ್ಛಾಪೂರ್ವಕವಾಗಿ ಸಹಿ ಹಾಕಿದ್ದರೆ, ಚೆಕ್ ನೀಡಿದವರು ಹೊರತಿಪಡಿಸಿ ಬೇರೆ ಯಾವುದೇ ವ್ಯಕ್ತಿ ಚೆಕ್ ನ ಇತರ ಕಾಲಂ ನ್ನು ಭರ್ತಿ ಮಾಡಿರಬಹುದು ಎಂಬುದು ಅಪ್ರಸ್ತುತ ಎಂದು ನ್ಯಾಯಪೀಠ ತಿಳಿಸಿದೆ.