ಆಧುನಿಕ ಕೃಷಿ ತಂತ್ರಜ್ಞಾನದ ಅರಿವು ಪಡೆದುಕೊಳ್ಳುವ ಸಲುವಾಗಿ ಸರ್ಕಾರಿ ಪ್ರಾಯೋಜಿತ ಇಸ್ರೇಲ್ ಪ್ರವಾಸಕ್ಕೆ ತೆರಳಿದ್ದ ಕೇರಳ ಮೂಲದ ರೈತರೊಬ್ಬರು ನಾಪತ್ತೆಯಾಗಿದ್ದು, ಇದೀಗ ಭಾರತಕ್ಕೆ ವಾಪಸ್ ಆಗಿದ್ದಾರೆ.
48 ವರ್ಷದ ಬಿಜು ಕುರಿಯನ್ ಇಂದು ಬೆಳಿಗ್ಗೆ 5 ಗಂಟೆ ಸುಮಾರಿಗೆ ಕ್ಯಾಲಿಕಟ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಂದಿಳಿದಿದ್ದು, ಈ ಸಂದರ್ಭದಲ್ಲಿ ಕೇರಳ ಸರ್ಕಾರ, ಕೃಷಿ ಸಚಿವ ಹಾಗೂ ತಮ್ಮೊಂದಿಗೆ ಪ್ರವಾಸಕ್ಕೆ ಬಂದಿದ್ದ 27 ಮಂದಿಯ ತಂಡಕ್ಕೆ ಕ್ಷಮೆ ಕೋರಿದ್ದಾರೆ.
27 ಮಂದಿಯ ತಂಡದ ಭಾಗವಾಗಿದ್ದ ಬಿಜು ಕುರಿಯನ್ ಫೆಬ್ರವರಿ 17ರಂದು ನಾಪತ್ತೆಯಾಗಿದ್ದು, ಆತಂಕ ವ್ಯಕ್ತವಾಗಿತ್ತು. ಇಂದು ಈ ಕುರಿತಂತೆ ಸ್ಪಷ್ಟನೆ ನೀಡಿರುವ ಅವರು, ಧಾರ್ಮಿಕ ಸ್ಥಳಗಳಾದ ಜೆರುಸಲೇಮ್ ಹಾಗೂ ಬೆಥ್‌ಲೆಹೆಮ್ ಗೆ ಭೇಟಿ ನೀಡಲು ತಾವು ತಂಡವನ್ನು ಬಿಟ್ಟು ಹೋಗಿದ್ದಾಗಿ ಹೇಳಿದ್ದಾರೆ.