
ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ‘ಕಾಟೇರ’ ಚಿತ್ರದ ನಾಯಕಿ ಆರಾಧನಾ ಸಾಮಾಜಿಕ ಜಾಲತಾಣದಲ್ಲಿ ಸದಾ ಸಕ್ರಿಯರಾಗಿರುತ್ತಾರೆ. ತಮ್ಮ ಪ್ರತಿಯೊಂದು ವಿಚಾರವನ್ನು ಹಂಚಿಕೊಳ್ಳುವ ಮೂಲಕ ನೆಟ್ಟಿಗರೊಂದಿಗೆ ಸದಾ ಸಂಪರ್ಕದಲ್ಲಿದ್ದಾರೆ. ಆರಾಧನಾ ಇತ್ತೀಚಿಗಷ್ಟೇ ಫೋಟೋಶೂಟ್ ಮಾಡಿಸಿದ್ದು, ತಮ್ಮ ಫೋಟೋಗಳನ್ನು ಒಂದೊಂದಾಗಿ instagram ಖಾತೆಯಲ್ಲಿ ಅಪ್ಲೋಡ್ ಮಾಡಿದ್ದಾರೆ. ಈ ಫೋಟೋಗಳಲ್ಲಿ ಯುವರಾಣಿಯಂತೆ ಕಂಗೊಳಿಸಿದ್ದು, ನೆಟ್ಟಿಗರಿಂದ ಲೈಕ್ಸ್ ಮತ್ತು ಕಮೆಂಟ್ಸ್ ಗಳ ಸುರಿಮಳೆಯೇ ಹರಿದು ಬಂದಿದೆ.
ನಟಿ ಆರಾಧನ ತಮ್ಮ ಮೊದಲ ಚಿತ್ರದಲ್ಲೇ ಭರ್ಜರಿ ಯಶಸ್ಸು ಕಂಡಿದ್ದು, ತಮ್ಮ ಬೋಲ್ಡ್ ಪಾತ್ರದ ಮೂಲಕ ಸಿನಿ ಪ್ರೇಕ್ಷಕರ ಗಮನ ಸೆಳೆದಿದ್ದಾರೆ. ‘ಕಾಟೇರ’ ಸಿನಿಮಾ ಈಗಾಗಲೇ ಬಾಕ್ಸ್ ಆಫೀಸ್ ನಲ್ಲಿ ಧೂಳ್ ಎಬ್ಬಿಸಿದ್ದು, ಓ ಟಿ ಟಿ ಫ್ಲಾಟ್ ಫಾರ್ಮ್ ಆದ ಜೀ 5 ನಲ್ಲಿ ಕೂಡ ಹೊಸ ದಾಖಲೆ ಬರೆದಿದೆ.

