ಬೆಂಗಳೂರು: ಭೂಮಾಪನ ಕಂದಾಯ ವ್ಯವಸ್ಥೆ ಮತ್ತು ಭೂ ದಾಖಲೆ ಇಲಾಖೆಯಲ್ಲಿನ ಕಲ್ಯಾಣ ಕರ್ನಾಟಕ ವೃಂದದ 100 ಭೂ ಮಾಪಕರ ಹುದ್ದೆಗಳ ಭರ್ತಿಗೆ ಕರ್ನಾಟಕ ಲೋಕಸೇವಾ ಆಯೋಗ(KPSC) ಅರ್ಜಿ ಆಹ್ವಾನಿಸಿದೆ.
ಮಾರ್ಚ್ 11ರಿಂದ ಏಪ್ರಿಲ್ 10 ರೊಳಗೆ ಆನ್ಲೈನ್ ನಲ್ಲಿ ಅರ್ಜಿ ಸಲ್ಲಿಸಬಹುದಾಗಿದೆ. ಜುಲೈ 6, 7ರಂದು ಪರೀಕ್ಷೆ ನಡೆಸಲು ತಾತ್ಕಾಲಿಕ ವೇಳಾಪಟ್ಟಿ ಪ್ರಕಟಿಸಲಾಗಿದ್ದು, ಬಿಇ, ಬಿಟೆಕ್(ಸಿವಿಲ್) ಅಥವಾ ಸಿವಿಲ್ ಇಂಜಿನಿಯರಿಂಗ್ ಡಿಪ್ಲೋಮಾ, ಪಿಯುಸಿ ಅಥವಾ 12ನೇ ತರಗತಿಯಲ್ಲಿ ವಿಜ್ಞಾನ ವಿಷಯದಲ್ಲಿ ಗಣಿತದಲ್ಲಿ ಶೇ. 60 ಕ್ಕಿಂತ ಹೆಚ್ಚಿನ ಅಂಕ ಪಡೆದಿರುವವರು, ಲ್ಯಾಂಡ್ ಅಂಡ್ ಸಿಟಿ ಸರ್ವೆ ಪದವಿ ಪೂರ್ವ ಡಿಪ್ಲೋಮಾ, ಐಟಿಐ ಇನ್ ಸರ್ವೇ ಟ್ರೇಡ್ ವ್ಯಾಸಂಗ ಮಾಡಿರುವವರು ಅರ್ಹತೆ ಹೊಂದಿರುತ್ತಾರೆ.
ಅರ್ಜಿ ಸಲ್ಲಿಸಿದ ನಂತರ ಅರ್ಜಿಯಲ್ಲಿ ವಿವರಗಳ ತಿದ್ದುಪಡಿ, ಸೇರ್ಪಡೆ ಮನವಿಗಳನ್ನು ತಿರಸ್ಕರಿಸಲಾಗುತ್ತದೆ. ಅಭ್ಯರ್ಥಿಗಳಿಗೆ ಒಂದು ಬಾರಿ ನೋಂದಣಿ ಪ್ರಕ್ರಿಯೆ ಒಳಗೊಂಡಿದ್ದು, ಮುಂದಿನ ಎಲ್ಲಾ ಅಧಿಸೂಚನೆಗಳಿಗೂ ಪರಿಗಣಿಸಲಾಗುವುದು. ಅಭ್ಯರ್ಥಿಗಳು ಪ್ರೊಫೈಲ್ ಸೃಷ್ಟಿಸಬೇಕು. ಅರ್ಜಿ ಸಲ್ಲಿಕೆ ಮತ್ತು ಮಾಹಿತಿಗೆ http://kpsc.kar.nic.in ವೆಬ್ಸೈಟ್ ಗಮನಿಸಬಹುದಾಗಿದೆ.