alex Certify ಅಂತರ್ಜಲ ಬಳಕೆದಾರರಿಗೆ ನಿರಾಕ್ಷೇಪಣಾ ಪತ್ರ ಕಡ್ಡಾಯ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಅಂತರ್ಜಲ ಬಳಕೆದಾರರಿಗೆ ನಿರಾಕ್ಷೇಪಣಾ ಪತ್ರ ಕಡ್ಡಾಯ

ಬೆಂಗಳೂರು: ಪ್ರಸ್ತುತ ಇರುವ ಹಾಗೂ ಹೊಸದಾಗಿ ಪ್ರಾರಂಭಿಸುವ ಕೈಗಾರಿಕೆ, ವಾಣಿಜ್ಯ, ಮೂಲಸೌಕರ್ಯ ಅಭಿವೃದ್ಧಿ, ಗಣಿಗಾರಿಕೆ, ಮನರಂಜನೆ ಯೋಜನೆಗಳಲ್ಲಿನ ಅಂತರ್ಜಲ ಬಳಕೆದಾರರು ನಿರಾಕ್ಷೇಪಣಾ ಪತ್ರ ಪಡೆಯುವುದು ಕಡ್ಡಾಯವಾಗಿದೆ.

ರಾಜ್ಯದಲ್ಲಿ ಈಗಾಗಲೇ ಕರ್ನಾಟಕ ಅಂತರ್ಜಲ ಪ್ರಾಧಿಕಾರ ಅಸ್ತಿತ್ವದಲ್ಲಿರುವುದರಿಂದ ಪ್ರಸ್ತುತ ಇರುವ ಹಾಗೂ ಹೊಸದಾಗಿ ಪ್ರಾರಂಭಿಸಿರುವ ಕೈಗಾರಿಕೆ/ವಾಣಿಜ್ಯ/ಮೂಲ ಸೌಕರ್ಯ ಅಭಿವೃದ್ಧಿ/ಗಣಿಗಾರಿಕೆ/ಮನರಂಜನೆ ಯೋಜನೆಗಳಲ್ಲಿನ ಅಂತರ್ಜಲ ಬಳಕೆದಾರರು ನಿರಾಕ್ಷೇಪಣಾ ಪತ್ರವನ್ನು ಕಡ್ಡಾಯವಾಗಿ ಕರ್ನಾಟಕ ಅಂತರ್ಜಲ ಪ್ರಾಧಿಕಾರದಿಂದ ಪಡೆಯಬೇಕಾಗಿರುತ್ತದೆ.

ಅದರಂತೆ ಸಂಬಂಧಪಟ್ಟ ಎಲ್ಲಾ ಕೈಗಾರಿಕೆ/ವಾಣಿಜ್ಯ/ಮೂಲ ಸೌಕರ್ಯ ಅಭಿವೃದ್ಧಿ/ಗಣಿಗಾರಿಕೆ/ಮನರಂಜನೆ ಯೋಜನೆಗಳಲ್ಲಿನ ಅಂತರ್ಜಲ ಬಳಕೆದಾರರು ಎನ್‌ಒಸಿ ಯನ್ನು ಪಡೆಯಲು https://kgwa.in/Public/ ವೆಬ್‌ಸೈಟ್‌ನ ಆನ್‌ಲೈನ್‌ ಸೇವೆಗಳಡಿ ಅರ್ಜಿ ಸಲ್ಲಿಸತಕ್ಕದ್ದು. ಟ್ಯಾಂಕರ್‌ ನೀರು ಸರಬರಾಜುಗೆ ಸಂಬಂಧಪಟ್ಟಂತೆ ಎನ್‌ಒಸಿ ಯನ್ನು ಪಡೆಯಲು ಆಯಾ ಜಿಲ್ಲೆಯ ಜಿಲ್ಲಾ ಅಂತರ್ಜಲ ಕಚೇರಿಗೆ ಭೌತಿಕವಾಗಿ ಅರ್ಜಿಗಳನ್ನು ಸಲ್ಲಿಸತಕ್ಕದ್ದು. ಹೆಚ್ಚಿನ ಮಾಹಿತಿಗಾಗಿ ಸಂಬಂಧಪಟ್ಟ ಜಿಲ್ಲಾ ಅಂತರ್ಜಲ ಕಚೇರಿಗಳನ್ನು ಸಂಪರ್ಕಿಸುವುದು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...