ಬೆಂಗಳೂರು: ಅಂತರರಾಷ್ಟ್ರೀಯ ಪ್ರಜಾಪ್ರಭುತ್ವ ದಿನದ ಅಂಗವಾಗಿ ರಾಜ್ಯ ಸರ್ಕಾರ ಸಂವಿಧಾನ ಪೀಠಿಕೆ ಓದುವ ಮಹತ್ವಾಕಾಂಕ್ಷಿ ಕಾರ್ಯಕ್ರಮಕ್ಕೆ ಅಭೂತಪೂರ್ವ ಸ್ಪಂದನೆ ವ್ಯಕ್ತವಾಗಿದ್ದು, ದೇಶ ವಿದೇಶಗಳಿಂದ ಎರಡು ಕೋಟಿಗೂ ಅಧಿಕ ಜನ ಆನ್ಲೈನ್ ನಲ್ಲಿ ಪಾಲ್ಗೊಂಡಿದ್ದು ವಿಶ್ವ ದಾಖಲೆಯಾಗಿದೆ.
84 ದೇಶ ಹಾಗೂ ಭಾರತದ 30 ರಾಜ್ಯಗಳಿಂದ ಒಟ್ಟು 2,31,66,401 ನೋಂದಣಿಯಾಗಿದೆ. ಏಕಕಾಲದಲ್ಲಿ ಆನ್ಲೈನ್ ಮೂಲಕ ಇಷ್ಟೊಂದು ಸಂಖ್ಯೆಯ ಜನ ಸಂವಿಧಾನ ಪೀಠಿಕೆ ವಾಚನ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದು ವಿಶ್ವ ದಾಖಲೆಯಾಗಿದೆ.
ಸಂವಿಧಾನ ಪೀಠಿಕೆ ಬಗ್ಗೆ ಜನಸಾಮಾನ್ಯರು, ವಿದ್ಯಾರ್ಥಿಗಳು ಸೇರಿದಂತೆ ಎಲ್ಲರಿಗೂ ತಿಳಿಸುವ ಉದ್ದೇಶದಿಂದ ರಾಜ್ಯ ಸರ್ಕಾರ ಶುಕ್ರವಾರ ಸಂವಿಧಾನ ಪೀಠಿಕೆ ವಾಚಿಸುವ ಕಾರ್ಯಕ್ರಮ ಆಯೋಜಿಸಿತ್ತು. ಅಮೆರಿಕ, ಆಸ್ಟ್ರೇಲಿಯಾ, ಸೌದಿ ಅರೇಬಿಯಾ, ಕೆನಡಾ, ಜರ್ಮನಿ ಮೊದಲಾದ ದೇಶಗಳು ಹಾಗೂ ಭಾರತದ 30 ರಾಜ್ಯದಲ್ಲಿ ಏಕಕಾಲದಲ್ಲಿ ಕೋಟ್ಯಂತರ ಜನರು ಆನ್ಲೈನ್ ಮೂಲಕ ಪಾಲ್ಗೊಂಡಿದ್ದು ವಿಶ್ವ ದಾಖಲೆಯಾಗಿದೆ.
ಎರಡು ಕೋಟಿಗೂ ಅಧಿಕ ಜನ ಸಂವಿಧಾನ ಪೀಠಿಕೆ ವಾಚನ ಮಾಡಿದ್ದು ವರ್ಲ್ಡ್ ಬುಕ್ ಆಫ್ ರೆಕಾರ್ಡ್ ಗೆ ಸೇರ್ಪಡೆಯಾಗಿದೆ. ವಿಧಾನಸೌಧ ಮುಂಭಾಗ ನಡೆದ ಕಾರ್ಯಕ್ರಮದಲ್ಲಿ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ. ಶಿವಕುಮಾರ್, ಸಚಿವ ಹೆಚ್.ಸಿ. ಮಹದೇವಪ್ಪ ಸೇರಿದಂತೆ ಸಾವಿರಾರು ಮಂದಿ ಭಾಗಿಯಾಗಿದ್ದರು.