
ಈ ವಿಡಿಯೋವನ್ನು ಟೀಮ್ ಇಂಡಿಯಾದ ಮತ್ತೊಬ್ಬ ಮಾಜಿ ಆಟಗಾರ ಗೌತಮ್ ಗಂಭೀರ್ ಹಂಚಿಕೊಂಡಿದ್ದು, ಕಪಿಲ್ ದೇವ್ ಅಪಹರಣವಾಗಿರುವುದು ಸತ್ಯಕ್ಕೆ ದೂರವಾದ ಸಂಗತಿ ಎಂದು ಹೇಳಿದ್ದಾರೆ. ಅಷ್ಟಕ್ಕೂ ಈ ವೈರಲ್ ವಿಡಿಯೋ ಹಿಂದಿನ ಅಸಲಿ ಸತ್ಯ ಇಲ್ಲಿದೆ.
ಜಾಹೀರಾತು ಒಂದಕ್ಕೆ ಈ ವಿಡಿಯೋವನ್ನು ಶೂಟ್ ಮಾಡಲಾಗಿದ್ದು, ಇದಕ್ಕಾಗಿ ಕಪಿಲ್ ದೇವ್ ಅವರ ಕೈಕಟ್ಟಿ, ಬಾಯಿಗೆ ಬಟ್ಟೆ ಬಿಗಿದು ಕೆಲವರು ಕರೆದುಕೊಂಡು ಹೋಗುವಂತೆ ಬಿಂಬಿಸಲಾಗಿದೆ. ಈ ವಿಡಿಯೋ ನೋಡಿದ ನೆಟ್ಟಿಗರು ಈಗ ಜಾಹೀರಾತು ಸಂಸ್ಥೆಗೆ ಜರೆಯುತ್ತಿದ್ದು, ಪ್ರಚಾರಕ್ಕಾಗಿ ಈ ರೀತಿ ಮಾಡುವುದು ಸರಿಯೇ ಎಂದು ಪ್ರಶ್ನಿಸುತ್ತಿದ್ದಾರೆ.