ಬೆಂಗಳೂರು: ಸಹಾಯಕ ಲೋಲೋ ಪೈಲಟ್ ಹುದ್ದೆಗಳಿಗೆ ಎರಡು ಹಂತಗಳ ಕಂಪ್ಯೂಟರ್ ಆಧರಿತ ಪರೀಕ್ಷೆಯನ್ನು ಕನ್ನಡ, ಕೊಂಕಣಿ ಸೇರಿ 13 ಪ್ರಾದೇಶಿಕ ಭಾಷೆಗಳಲ್ಲಿ ಬರೆಯಲು ಭಾರತೀಯ ರೈಲ್ವೆ ಅವಕಾಶ ನೀಡಿದೆ.
ಈಗ ಟೆಕ್ನಿಷಿಯನ್ ಗಳ ನೇಮಕಾತಿಗೆ ಪರೀಕ್ಷೆಗೂ ಈ ನಿಯಮ ಅನ್ವಯಿಸಲಾಗಿದೆ. ಇಂಗ್ಲೀಷ್, ಹಿಂದಿ ಮಾತ್ರವಲ್ಲದೆ, ಕನ್ನಡ, ಕೊಂಕಣಿ, ತಮಿಳು, ತೆಲುಗು, ಮಲಯಾಳಂ ಸೇರಿ 13 ಭಾಷೆಗಳಲ್ಲಿ ಅಭ್ಯರ್ಥಿಗಳು ಪರೀಕ್ಷೆ ಬರೆಯಬಹುದು.
ಈ ವರ್ಷ ಗ್ರೇಡ್ -1 ಮತ್ತು ಗ್ರೇಡ್ -3 ವೃಂದದ 9144 ಟೆಕ್ನಿಷಿಯನ್ ಗಳ ನೇಮಕಾತಿ ಮಾಡಿಕೊಳ್ಳಲಾಗುವುದು. ಒಟ್ಟು ಹುದ್ದೆಗಳಲ್ಲಿ ರಾಜ್ಯದ ನೈರುತ್ಯ ರೈಲ್ವೆಗೆ 426 ಹುದ್ದೆಗಳನ್ನು ಮೀಸಲಿಡಲಾಗಿದ್ದು, ಪದವಿ, ಐಟಿಐ ವಿದ್ಯಾರ್ಹತೆ ಹೊಂದಿದ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ.