ಲಖನೌ: ಖೇಲೋ ಇಂಡಿಯಾ ಯೂನಿವರ್ಸಿಟಿ ಗೇಮ್ಸ್‌ನ ದುರುಪಯೋಗದ ಹಿನ್ನೆಲೆಯಲ್ಲಿ ಗಾಯಕ ಕೈಲಾಶ್ ಖೇರ್ ಆಯೋಜಕರ ವಿರುದ್ಧ ವಾಗ್ದಾಳಿ ನಡೆಸಿದರು.
ಲಖನೌದಲ್ಲಿ ನಡೆದ ಕಾರ್ಯಕ್ರಮದ ಉದ್ಘಾಟನಾ ಸಮಾರಂಭದಲ್ಲಿ ಪ್ರದರ್ಶನ ನೀಡಲು ಜನಪ್ರಿಯ ಕಲಾವಿದರನ್ನು ಆಹ್ವಾನಿಸಲಾಗಿತ್ತು. ಆದರೂ ಸ್ಥಳದಲ್ಲಿ ಸರಿಯಾದ ವ್ಯವಸ್ಥೆ ಮಾಡಿಲ್ಲವೆನ್ನುವ ಕಾರಣಕ್ಕೆ ಅವರು ಸಂಘಟಕರ ಮೇಲೆ ಸಿಡಿಮಿಡಿಗೊಂಡಿದ್ದಾರೆ.
ಅಸಮಾಧಾನಗೊಂಡ ಗಾಯಕ ಏಕಾಏಕಿ ಸಂಘಟಕರನ್ನು ಟೀಕಿಸುತ್ತಿರುವುದು ವೈರಲ್ ವಿಡಿಯೋದಲ್ಲಿ ನೋಡಬಹುದು. “ನೀವು ನನ್ನನ್ನು ಒಂದು ಗಂಟೆ ಕಾಯುವಂತೆ ಮಾಡಿ ನಂತರ ನನ್ನೊಂದಿಗೆ ಅನುಚಿತವಾಗಿ ವರ್ತಿಸಿದ್ದೀರಿ. ಇದು ಯಾವ ರೀತಿಯ ಖೇಲೋ ಇಂಡಿಯಾ ಎಂದು ಅವರು ಆವಾಜ್ ಹಾಕಿದ್ದಾರೆ. ನೀವು ನನ್ನನ್ನು ಪ್ರದರ್ಶನಕ್ಕೆ ಕರೆದಿದ್ದರೆ, ಮುಂದಿನ ಒಂದು ಗಂಟೆ ಸಂಪೂರ್ಣವಾಗಿ ನನ್ನದಾಗಿದೆ. ನಾನು ನನ್ನ ತಾಯಿನಾಡು ಮತ್ತು ಅದರ ಪ್ರಜೆಗಳನ್ನು ಆರಾಧಿಸುತ್ತೇನೆ. ಆದರೆ ನಿರ್ವಹಣೆ ಸರಿಯಾಗಿರಬೇಕು. ಮೊದಲು ನಿಮ್ಮ ಆಚಾರ ವಿಚಾರಗಳನ್ನು ಕಲಿಯಿರಿ. ಇಲ್ಲದಿದ್ದರೆ ಕಾರ್ಯಕ್ರಮಕ್ಕೆ ಅಡ್ಡಿಯಾಗುತ್ತದೆ ಎಂದಿದ್ದಾರೆ.
'खेलो इंडिया' की खोली पोल
प्रधानमंत्री जी के स्वघोषित नवरत्न ने।
..तभी तो इतना अहंकार है।#KailashKher pic.twitter.com/VlbpZ2Lcgc— Surya Pratap Singh IAS Rtd. (@suryapsingh_IAS) May 26, 2023