ಬೆಂಗಳೂರು : ಕರ್ನಾಟಕ ಪರೀಕ್ಷಾ ಪ್ರಾಧಿಕಾರ ನಡೆಸುವ ಕೆ ಸೆಟ್ ಪರೀಕ್ಷೆಗೆ ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಲು ನಿಗದಿಪಡಿಸಿದ್ದ ಕೊನೆಯ ದಿನಾಂಕವನ್ನು ಅಕ್ಟೋಬರ್ 9 ರವರೆಗೆ ವಿಸ್ತರಿಸಲಾಗಿದೆ.
ಡಿಜಿಟಲೀಕರಣಗೊಂಡ ಅಂಚೆ ಕಚೇರಿಗಳ ಮೂಲಕ ಶುಲ್ಕ ಪಾವತಿಗೆ ಅಕ್ಟೋಬರ್ 11 ರವರೆಗೆ ಅವಕಾಶ ಕಲ್ಪಿಸಿದೆ. ಹೆಚ್ಚಿನ ಮಾಹಿತಿಗಾಗಿ ಕೆಇಎ ವೆಬ್ ಸೈಟ್ https:\\cetonline.karnataka.gov.in,\kea\ ನೋಡಬಹುದು.
ಅರ್ಜಿ ಸಲ್ಲಿಕೆ ಪ್ರಕ್ರಿಯೆ
* ಅಧಿಕೃತ ವೆಬ್‌ಸೈಟ್ https://karnemakaone.kar.nic.in/pqrs/ApplicationForm_JA_org.aspx?utm_source=DH-MoreFromPub&utm_medium=DH-app&utm_campaign=DH ನೇರ ಲಿಂಕ್ ಮೂಲಕ ಅರ್ಜಿ ಸಲ್ಲಿಕೆ ಓಪನ್ ಮಾಡಿಕೊಳ್ಳಿ.
* ಕಾಣಿಸುವ ಪರದೆಯಲ್ಲಿ ನಿಮಗೆ ಕೇಳಲಾಗುವ ಸೂಕ್ತ ಮಾಹಿತಿ ನಮೂದಿಸಿ.
* ಎಲ್ಲ ವಿವರ ದಾಖಲಿಸಿದ ನಂತರ ಸಲ್ಲಿಕೆಗೂ (Submit) ಮೊದಲು ನಮೂದಿಸಿದ ವಿವಿರಗಳು/ಮಾಹಿತಿ ಸರಿಯಾಗಿದೆಯೇ ಇಲ್ಲ ಎಂದು ಚೆಕ್ ಮಾಡಿ ನಂತರ ಸಬ್ಮಿಟ್ ಕೊಡಿ.
* ಇದೆಲ್ಲ ಪ್ರಕ್ರಿಯೆ ಮೂಲಕ ಮುಂದಿನ ರೆಫರೆನ್ಸ್‌ಗೆಂದು ಸಲ್ಲಿಕೆಯಾದ ಅರ್ಜಿಯನ್ನು ಡೌನ್‌ಲೋಡ್ ಮಾಡಿಕೊಳ್ಳಬೇಕು.