
ಮೈಸೂರು: ಒಕ್ಕಲಿಗರ ಬಗ್ಗೆ ಪ್ರೊ. ಕೆ.ಎಸ್. ಭಗವಾನ್ ಅವಹೇಳನಕಾರಿ ಹೇಳಿಕೆ ನೀಡಿದ ವಿಚಾರಕ್ಕೆ ಸಂಬಂಧಿಸಿದಂತೆ ದಸರಾ ಯುವ ಕವಿಗೋಷ್ಠಿ ಉದ್ಘಾಟನೆಯಿಂದ ಅವರಿಗೆ ಕೊಕ್ ನೀಡಲಾಗಿದೆ.
ರಾಜ್ಯ ಒಕ್ಕಲಿಗರ ಪಡೆಯ ಪ್ರತಿಭಟನೆ ಎಚ್ಚರಿಕೆಗೆ ಮಣಿದು ಬದಲಾವಣೆ ಮಾಡಲಾಗಿದೆ. ನಾಳೆ ಪ್ರತಿಭಟನೆ ಮಾಡುವುದಾಗಿ ರಾಜ್ಯ ಒಕ್ಕಲಿಗರ ಪಡೆ ಎಚ್ಚರಿಕೆ ನೀಡಿತ್ತು. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಬಳಿ ಪ್ರತಿಭಟನೆಯ ಎಚ್ಚರಿಕೆ ನೀಡಿದ್ದು, ಪ್ರೊ. ಭಗವಾನ್ ಬದಲಿಗೆ ಸಾಹಿತಿ ಡಾ. ಡಿ.ಕೆ. ರಾಜೇಂದ್ರ ಅವರು ದಸರಾ ಕವಿ ಗೋಷ್ಠಿ ಉದ್ಘಾಟಿಸಲಿದ್ದಾರೆ.
ರಾಜ್ಯ ಒಕ್ಕಲಿಗರ ಪಡೆಯ ಪ್ರತಿಭಟನೆಗೆ ಮಣಿದು ಯುವ ಕವಿಗೋಷ್ಠಿ ಉದ್ಘಾಟನೆಗೆ ಕೆ.ಎಸ್. ಭಗವಾನ್ ಬದಲು ಡಾ. ಡಿ.ಕೆ. ರಾಜೇಂದ್ರ ಅವರಿಂದ ಉದ್ಘಾಟನೆ ಮಾಡಿಸಲು ಕನ್ನಡ ಸಾಹಿತ್ಯ ಪರಿಷತ್ ನಿರ್ಧರಿಸಿದೆ.