ಇನ್‌ಸ್ಟಾಗ್ರಾಮ್‌ನಲ್ಲಿ ಜನಪ್ರಿಯವಾಗಲು ಸ್ನೇಹಿತನನ್ನೇ ಕೊಂದ ಆರೋಪದ ಮೇಲೆ ರಾಜಸ್ಥಾನ ಪೊಲೀಸರು ಇಬ್ಬರು ಸಹಚರರೊಂದಿಗೆ ಬಾಲಾಪರಾಧಿಯನ್ನು ಬಂಧಿಸಿದ್ದಾರೆ.
ಕೋಟಾದಲ್ಲಿ ಎರಡು ದಿನಗಳ ಹಿಂದೆ ರೀಲ್ ಮಾಡುವಾಗ ಕಂಟ್ರಿಮೇಡ್ ಪಿಸ್ತೂಲ್‌ನಿಂದ ಗುಂಡು ಹಾರಿದ್ದು ವಿದ್ಯಾರ್ಥಿಯೊಬ್ಬ ಮೃತಪಟ್ಟಿದ್ದ. ಬಳಿಕ ಕುಟುಂಬಸ್ಥರು ದೂರು ದಾಖಲಿಸಿ ಇದೊಂದು ಯೋಜಿತ ಕೊಲೆ ಎಂದು ಆರೋಪಿಸಿದ್ದರು.
ಸ್ನೇಹಿತನನ್ನು ಮಾರಣಾಂತಿಕವಾಗಿ ಶೂಟ್ ಮಾಡಿದ ಬಾಲಾಪರಾಧಿ ಸೇರಿದಂತೆ ಆರೋಪಿಯ ಸಹಚರರಾದ ಅಜಯ್ ಸಾಲ್ವಿ ಮತ್ತು ದೀಪಕ್ ಪ್ರಜಾಪತಿ ಅಲಿಯಾಸ್ ‘ಲಡ್ಡು ಶೂಟರ್’ ನನ್ನೂ ಬಂಧಿಸಲಾಗಿದೆ.
ಕೋಟಾ ಎಸ್ಪಿ ಅಮೃತಾ ದುಹಾನ್ ಮಾತನಾಡಿ ಮೇ 1 ರಂದು ಸಮುದಾಯ ಕೇಂದ್ರದ ಮುಂಭಾಗದ ಟೀ ಸ್ಟಾಲ್‌ನಲ್ಲಿ ತನ್ನ ಮಗನನ್ನು ಅಜಯ್ ಸಾಲ್ವಿ, ದೀಪಕ್ ಪ್ರಜಾಪತಿ ಮತ್ತು ಇತರರು ಗುಂಡು ಹಾರಿಸಿ ಸಾಯಿಸಿದ್ದಾರೆಂದು ದೂರುದಾರರು ಆರೋಪಿಸಿರುವುದಾಗಿ ತಿಳಿಸಿದರು. ಸುಳಿವಿನ ಮೇರೆಗೆ ಬಾಲಾಪರಾಧಿ ಸೇರಿದಂತೆ ಆತನ ಸಹಚರರನ್ನು ಬಂಧಿಸಿದ್ದು, ಕಂಟ್ರಿಮೇಡ್ ಪಿಸ್ತೂಲ್ ಮತ್ತು ಅಪರಾಧಕ್ಕೆ ಬಳಸಿದ ಖಾಲಿ ಕಾರ್ಟ್ರಿಡ್ಜ್ ಅನ್ನು ಸಹ ವಶಪಡಿಸಿಕೊಂಡಿದ್ದಾರೆ.