ಹೆಚ್ಚಿನ ಜನರು ತಮ್ಮದೇ ಆದ ಸ್ವಂತ ಸೂರನ್ನು ಹೊಂದುವ ಕನಸು ಕಾಣುತ್ತಾರೆ. ಈ ಕನಸನ್ನು ನನಸಾಗಿಸುವುದು ಬಹುತೇಕರಿಗೆ ಸವಾಲಿನ ಕೆಲಸವಾಗಿದೆ. ಗೃಹ ಸಾಲಕ್ಕೆ ಅರ್ಜಿ ಸಲ್ಲಿಸುವುದು ಸೇರಿದಂತೆ ಎಲ್ಲರೂ ಎಲ್ಲರ ಕೈ ಹಿಡಿಯುವುದಿಲ್ಲ.
ಹತ್ತಾರು ಹಣಕಾಸಿನ ಅಡೆತಡೆಗಳನ್ನು ದಾಟಬೇಕಾಗುತ್ತದೆ. ಆದರೂ, ದೃಢನಿಶ್ಚಯವಿರುವ ವ್ಯಕ್ತಿ ಎಲ್ಲವನ್ನೂ ಜಯಿಸಬಲ್ಲ ಎನ್ನುವುದಕ್ಕೆ ತಮಿಳುನಾಡಿನ ಮಹಿಳೆ ಸಾಕ್ಷಿಯಾಗಿದ್ದಾರೆ.
ಹ್ಯೂಮನ್ಸ್ ಆಫ್ ಮದ್ರಾಸ್‌ನ ಇನ್‌ಸ್ಟಾಗ್ರಾಮ್ ಹ್ಯಾಂಡಲ್ ಚೆನ್ನೈನ ಎಂಜಿಆರ್ ನಗರದ ನಿವಾಸಿ 36 ವರ್ಷದ ಪರಮೇಶ್ವರಿ ಅವರ ಸ್ಫೂರ್ತಿದಾಯಕ ಪ್ರಯಾಣದ ಕುರಿತು ಪೋಸ್ಟ್ ಮಾಡಲಾಗಿದೆ.
ಅವರು ಎರಡು ದಶಕಗಳ ಪರಿಶ್ರಮದ ನಂತರ ಸ್ವಂತ ಮನೆಯನ್ನು ಕಟ್ಟುವಲ್ಲಿ ಯಶಸ್ವಿಯಾಗಿದ್ದಾರೆ. ಅವರು ಯಾವುದೇ ಔಪಚಾರಿಕ ಶಿಕ್ಷಣವನ್ನು ಪಡೆಯಲಿಲ್ಲ. ಚಿಕ್ಕ ವಯಸ್ಸಿನಲ್ಲಿಯೇ ಮದುವೆಯಾಗಿ ಪಡಬಾರದ ಕಷ್ಟ ಪಟ್ಟರು. ಪತಿ ಮದ್ಯವ್ಯಸನಿ. ಕೆಲಸ ಮಾಡುವುದನ್ನು ನಿಲ್ಲಿಸಿದ ನಂತರ, ಇಡೀ ಮನೆಯ ಜವಾಬ್ದಾರಿ ಪರಮೇಶ್ವರಿ ಹೆಗಲ ಮೇಲೆ ಬಿತ್ತು.
ನನ್ನ ಪತಿ ಮನೆಯಲ್ಲಿಯೇ ಇರುವುದರಿಂದ ನನ್ನ ಇಡೀ ಕುಟುಂಬವನ್ನು ನಾನು ನೋಡಿಕೊಳ್ಳುತ್ತೇನೆ, ನನ್ನ ಮಗಳು 12 ನೇ ತರಗತಿಯನ್ನು ಪೂರ್ಣಗೊಳಿಸಿದ್ದಾಳೆ, ನನ್ನ ಮಗ 5 ನೇ ತರಗತಿಯಲ್ಲಿದ್ದಾನೆ, ಮತ್ತು ನಾನು ಮಗುವಿನೊಂದಿಗೆ ವಿಧವೆಯಾಗಿರುವ ಸಹೋದರಿಯನ್ನು ಹೊಂದಿದ್ದೇನೆ ಎನ್ನುತ್ತಾರೆ ಪರಮೇಶ್ವರಿ.
ಮಹಿಳೆಯರು ಮಾಡಲಾಗದುದು ಏನೂ ಇಲ್ಲ. ನಾನು ಯಾವುದೇ ಶಿಕ್ಷಣವನ್ನು ಪಡೆದಿಲ್ಲ. ಸಾಧಿಸುವ ಛಲವೊಂದು ಇದ್ದರೆ ಸಾಕು ಎನ್ನುವ ಪರಮೇಶ್ವರಿ ಅವರು ಎಲ್ಲರ ಜವಾಬ್ದಾರಿ ವಹಿಸಿಕೊಳ್ಳುವ ಜೊತೆಗೆ ಏಳು ಮಂದಿ ವಾಸಿಸುವಂಥ ಮನೆಯನ್ನು ಮೂರು ಕಡೆಗಳಲ್ಲಿ ಕೆಲಸ ಮಾಡಿ ಕಟ್ಟಿರುವ ಹೆಗ್ಗಳಿಕೆ ಗಳಿಸಿದ್ದಾರೆ. 20 ವರ್ಷಗಳ ಕಠಿಣ ಶ್ರಮದ ನಂತರ ಈ ಸಾಧನೆ ಮಾಡಿದ್ದಾರೆ.