ವಿಜಯಪುರ: ಉತ್ತರ ಕರ್ನಾಟಕ ಭಾಗದ ಊಟದಲ್ಲಿ ರೊಟ್ಟಿಗೆ ಅಗ್ರಸ್ಥಾನವಿದೆ. ವಿಜಯಪುರದ ಬಿಳಿ ಜೋಳದ ರೊಟ್ಟಿ ಇಲ್ಲದೆ ಊಟ ಪರಿಪೂರ್ಣ ಎನಿಸುವುದಿಲ್ಲ. ಆದರೆ, ಮಳೆ ಕೊರತೆಯಿಂದಾಗಿ ಬಿಳಿ ಜೋಳ ಬೆಲೆ ಗಗನಕ್ಕೇರಿದೆ. ಇದರಿಂದಾಗಿ ರೊಟ್ಟಿ ಪ್ರಿಯರಿಗೆ ಬೆಲೆ ಏರಿಕೆಯ ಬಿಸಿ ತಟ್ಟಿದೆ.
ವಿಜಯಪುರ ಜಿಲ್ಲೆಯಲ್ಲಿ ಇತ್ತೀಚಿನ ವರ್ಷಗಳಲ್ಲಿ ಬಿಳಿ ಜೋಳ ಬಿತ್ತನೆ ಪ್ರಮಾಣ ಕಡಿಮೆಯಾಗಿದೆ. ಈ ಬಾರಿ ಮುಂಗಾರು ಮಳೆ ಕೈಕೊಟ್ಟಿದ್ದು, ಹಿಂಗಾರು ಮಳೆ ನಿರೀಕ್ಷೆಯು ಇಲ್ಲದಂತಾಗಿದೆ. ಅಲ್ಪಸ್ವಲ್ಪ ಪ್ರಮಾಣದಲ್ಲಿ ರೈತರು ಜೋಳ ಬೆಳೆದಿದ್ದಾರೆ. ಆದರೆ, ಮಳೆ ಇಲ್ಲದ ಕಾರಣ ಫಸಲು ಬರುವ ಲಕ್ಷಣಗಳು ಇಲ್ಲ. ಹೀಗಾಗಿ ಮಾರುಕಟ್ಟೆಗೆ ಜೋಳ ಪೂರೈಕೆಯಾಗದೆ ದರ ಏರಿಕೆಯಾಗುತ್ತಿದೆ. ಒಂದು ಕ್ವಿಂಟಲ್ ಬಿಳಿ ಜೋಳಕ್ಕೆ 6 ಸಾವಿರ ರೂಪಾಯಿ ಇದ್ದು, ಮಳೆ ಇಲ್ಲದೆ ಬೆಳೆ ಬರದಿದ್ದರೆ ದರ ಇನ್ನೂ ಏರಿಕೆಯಾಗುವ ಸಾಧ್ಯತೆ ಇದೆ.
ಹಿಂಗಾರು ಹಂಗಾಮಿನಲ್ಲಿ ಜೋಳದ ಫಸಲು ಬರದಿದ್ದಲ್ಲಿ ಉತ್ತರ ಕರ್ನಾಟಕದ ಪ್ರಮುಖ ಆಹಾರ ರೊಟ್ಟಿಗೆ ಜೋಳ ಸಿಗುವುದು ಕಷ್ಟ ಸಾಧ್ಯ. ಅಲ್ಲದೆ ಪ್ರಸ್ತು 6000 ರೂ. ಇರುವ ದರ ಇನ್ನೂ ಏರಿಕೆಯಾಗುವ ಸಾಧ್ಯತೆ ಇದೆ ಎನ್ನಲಾಗಿದೆ.