alex Certify JOB ALERT : ‘SSLC’ ಪಾಸಾದವರಿಗೆ ಗುಡ್ ನ್ಯೂಸ್ : ಅ.30 ರಂದು ಅಂಚೆ ಇಲಾಖೆಯಿಂದ ನೇರ ಸಂದರ್ಶನಕ್ಕೆ ಆಹ್ವಾನ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

JOB ALERT : ‘SSLC’ ಪಾಸಾದವರಿಗೆ ಗುಡ್ ನ್ಯೂಸ್ : ಅ.30 ರಂದು ಅಂಚೆ ಇಲಾಖೆಯಿಂದ ನೇರ ಸಂದರ್ಶನಕ್ಕೆ ಆಹ್ವಾನ

ಬಳ್ಳಾರಿ : ಅಂಚೆ ಜೀವ ವಿಮೆ ಹಾಗೂ ಗ್ರಾಮೀಣ ಅಂಚೆ ಜೀವ ವಿಮೆ ಉತ್ಪನ್ನಗಳನ್ನು ಮಾರಾಟ ಮಾಡಲು ನೇರ ಪ್ರತಿನಿಧಿ ಮತ್ತು ಫೀಲ್ಡ್ ಆಫೀಸರ್ ನಿಯುಕ್ತಿಗಾಗಿ ಅರ್ಹ ಅಭ್ಯರ್ಥಿಗಳ ನೇರ ಸಂದರ್ಶನವನ್ನು ಹಮ್ಮಿಕೊಳ್ಳಲಾಗಿದೆ.

ಅಭ್ಯರ್ಥಿಗಳು ತಮ್ಮ ಇತ್ತೀಚಿನ ಭಾವಚಿತ್ರದೊಂದಿಗೆ ಅವರ ಶೈಕ್ಷಣಿಕ ಪ್ರಮಾಣಪತ್ರದ ನಕಲು ಪ್ರತಿಗಳೊಂದಿಗೆ ಅ.30ರಂದು ಬೆಳಗ್ಗೆ 10ಕ್ಕೆ ಬಳ್ಳಾರಿ ಕೋಟೆ ಆವರಣದಲ್ಲಿ ಇರುವ ಅಂಚೆ ಅಧೀಕ್ಷಕರ ಕಾರ್ಯಾಲಯದಲ್ಲಿ ನಡೆಯಲಿರುವ ನೇರ ಸಂದರ್ಶನಕ್ಕೆ ಹಾಜರಾಗಿ ಎಂದು ಅಂಚೆ ಅಧೀಕ್ಷಕರು ಬಳ್ಳಾರಿ ವಿಭಾಗ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

*ಅರ್ಹತಾ ನಿಯಮಗಳು:* ಅಭ್ಯರ್ಥಿಗಳು ಹತ್ತನೇ ತರಗತಿ ಉತ್ತೀರ್ಣರಾಗಿದ್ದು ಕನಿಷ್ಠ 18 ವರ್ಷ ವಯೋಮಿತಿ ಇರಬೇಕು, ಹಾಗೂ ಗರಿಷ್ಠ ವಯಸ್ಸಿನ ಮಿತಿ ಇರುವುದಿಲ್ಲ. *ನೇರ ಪ್ರತಿನಿದಿಗಳು:* ನಿರುದ್ಯೋಗಿ ಹಾಗೂ ಸ್ವಯಂ ಉದ್ಯೋಗ ನಿರತ ಯುವಕರು, ವಿಮಾ ಕಂಪನಿಗಳ ಸಲಹೆಗಾರರು, ಮಾಜಿ ಸೈನಿಕರು, ಅಂಗನವಾಡಿ ಕಾರ್ಯಕರ್ತಯರು, ಮಹಿಳಾ ಮಂಡಳದ ಕಾರ್ಯಕರ್ತೆಯರು, ಮಾಜಿ ಗ್ರಾಮ ಪಂಚಾಯಿತಿಯ ಸದಸ್ಯರು.

*ಫೀಲ್ಡ್ ಆಫೀಸರ್:* ನಿವೃತ್ತ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ನೌಕರರು,ಅಂಚೆ ವಿಭಾಗದ ಮುಖ್ಯಸ್ಥರಿಗೆ ಸಮಂಜಸವೆಂದು ಕಂಡುಬಂದ ಯಾವುದೇ ಅಭ್ಯರ್ಥಿಗಳಿಗೆ ಆಯ್ಕೆಯಾದ ಪಕ್ಷದಲ್ಲಿ ಅವಕಾಶ ನೀಡಲಾಗುವುದು.
ಆಯ್ಕೆಯಾದ ಅಭ್ಯರ್ಥಿಗಳು ರೂ 5000 ಗಳನ್ನು ರಾಷ್ಟ್ರೀಯ ಉಳಿತಾಯ ಪತ್ರ ಅಥವಾ ಕಿಸಾನ್ ವಿಕಾಸ ಪತ್ರ ರೂಪದಲ್ಲಿ ಭದ್ರತಾ ಠೇವಣಿಯನ್ನು ಇಡಬೇಕಾಗುತ್ತದೆ. ಅಯ್ಕೆಯಾದ ನೇರ ಪ್ರತಿನಿಧಿ/ಫೀಲ್ಡ್ ಆಫೀಸರಗಳಿಗೆ ಅವರು ಮಾಡಿದ ವ್ಯವಹಾರಕ್ಕೆ ತಕ್ಕಂತ ಸೂಕ್ತ ಕಮಿಷನ್ ನೀಡಲಾಗುವುದು, ಯಾವುದೇ ನಿಗದಿತ ವೇತನ ಇರುವುದಿಲ್ಲ. ಅಭ್ಯರ್ಥಿಗಳು ಬೇರೆ ಯಾವುದೇ ವಿಮಾ ಕಂಪನಿ/ಸಂಸ್ಥೆ/ಸಂಘಗಳ ಏಜೆಂಟ್ ಆಗಿರಬಾರದು.
ಹೆಚ್ಚಿನ ಮಾಹಿತಿಗಾಗಿ ಹತ್ತಿರದ ಅಂಚೆ ಕಚೇರಿಯನ್ನು ಸಂಪರ್ಕಿಸಬಹುದಾಗಿದೆ ಎಂದು ಪ್ರಕಟಣೆ ತಿಳಿಸಿದೆ.

 

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...