ಆಗಸ್ಟ್​ 13 ರಂದು ಬೆಂಗಳೂರಿನಲ್ಲಿ ಜಿಯೋ ಮಾರ್ಟ್ ​ಫ್ರೀಡಂ ರನ್​

JioMart Freedom Run Powered By adidas | Event in Bengaluru | Townscript

ಬೆಂಗಳೂರು: ಭಾರತದ 77ನೇ ಸ್ವಾತಂತ್ರ್ಯ ದಿನಾಚರಣೆಯ ಸಂಭ್ರಮದ ಹಿನ್ನೆಲೆಯಲ್ಲಿ ಜಿಯೋಮಾರ್ಟ್ ​ಪ್ರಸ್ತುತಿಯೊಂದಿಗೆ ‘ಅಡಿಡಾಸ್​’ ಸಹಯೋಗದ ‘ಜಿಯೋ ಮಾರ್ಟ್ ​ಫ್ರೀಡಂ ರನ್​’ ಆಗಸ್ಟ್​13ರ ಭಾನುವಾರದಂದು ಬೆಂಗಳೂರಿನ ಹಲಸೂರು ಕೆರೆ ಸಮೀಪದ ಗಂಗಾಧರ ಚೆಟ್ಟಿ ರಸ್ತೆಯ ಸೌತ್​ ಯುನೈಟೆಡ್​ಫುಟ್​ಬಾಲ್ ​ಕ್ಲಬ್​ನಲ್ಲಿ ನಡೆಯಲಿದೆ.

ಅಡಿಡಾಸ್ ​ಸಹಯೋಗದ ‘ಜಿಯೋ ಮಾರ್ಟ್​ ಫ್ರೀಡಂ ರನ್​’ ಎರಡು ವಿಭಾಗಗಳಲ್ಲಿ ನಡೆಯಲಿದೆ. ಬೆಳಗ್ಗೆ 5 ಗಂಟೆಯಿಂದ 10ಕೆ ಓಟದ ಸ್ಪರ್ಧೆ ನಡೆದರೆ, ಬೆಳಗ್ಗೆ 6 ರಿಂದ 5ಕೆ ಓಟ ಆರಂಭಗೊಳ್ಳಲಿದೆ. ಬೆಂಗಳೂರಿನಲ್ಲಿ ಸ್ವಾತಂತ್ರ್ಯ ದಿನಾಚರಣೆಯ ವಾರದಲ್ಲಿ ನಡೆಯಲಿರುವ ಈ ಕೂಟದಲ್ಲಿ ನೂರಾರು ಫಿಟ್‌ನೆಸ್ ಉತ್ಸಾಹಿಗಳು ಮತ್ತು ಓಟಗಾರರು ಪಾಲ್ಗೊಳ್ಳುವ ನಿರೀಕ್ಷೆ ಇದೆ. ಯಾವುದೇ ಶುಲ್ಕವಿಲ್ಲದೆ 18 ವರ್ಷ ಮೇಲ್ಪಟ್ಟ ಎಲ್ಲರೂ ಓಟದಲ್ಲಿ ಪಾಲ್ಗೊಳ್ಳಬಹುದಾಗಿದೆ. https://bit.ly/440hYGP ನಲ್ಲಿ ಸರಳವಾಗಿ ಹೆಸರು ನೋಂದಾಯಿಸಿಕೊಳ್ಳಬಹುದಾಗಿದೆ.

ಓಟ ಪೂರ್ಣಗೊಂಡ ನಂತರ ಎಲ್ಲಾ ಓಟಗಾರರಿಗೆ ಪದಕಗಳು ಮತ್ತು ಇ-ಪ್ರಮಾಣಪತ್ರಗಳನ್ನು ನೀಡಲಾಗುತ್ತದೆ. ವಿಜೇತರು ಪದಕಗಳು, ಪ್ರಮಾಣಪತ್ರಗಳು ಮತ್ತು ಅತ್ಯಾಕರ್ಷಕ ಅಡಿಡಾಸ್ ​ಸರಕುಗಳನ್ನು ಪಡೆಯಲಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read