ಇನ್ಮುಂದೆ ಸಿಮ್ ಕಾರ್ಡ್ ಕೊಳ್ಳೋ ಮುಂಚೆ ಆ ಏರಿಯಾದಲ್ಲಿ ಯಾವ ನೆಟ್‌ವರ್ಕ್ ಸ್ಟ್ರಾಂಗ್ ಆಗಿದೆ ಅಂತಾ ಆನ್‌ಲೈನ್‌ನಲ್ಲೇ ಚೆಕ್ ಮಾಡಬಹುದು. ಟೆಲಿಕಾಂ ಕಂಪನಿಗಳಾದ ಜಿಯೋ, ಏರ್‌ಟೆಲ್, ವಿಐ ತಮ್ಮ ವೆಬ್‌ಸೈಟ್‌ಗಳಲ್ಲಿ ನೆಟ್‌ವರ್ಕ್ ಕವರೇಜ್ ನಕ್ಷೆಗಳನ್ನು ಹಾಕಿವೆ.
ಮೊದಲೆಲ್ಲಾ ಸಿಮ್ ಕಾರ್ಡ್ ಕೊಂಡುಕೊಳ್ಳುವ ಮುಂಚೆ ಯಾವ ನೆಟ್‌ವರ್ಕ್ ಚೆನ್ನಾಗಿದೆ ಅಂತ ಗೊತ್ತಾಗ್ತಿರಲಿಲ್ಲ. ಇದರಿಂದ ನೆಟ್‌ವರ್ಕ್ ಸಿಗದಂತಾಗೋದು, ಕಾಲ್ ಡ್ರಾಪ್ ಆಗೋದು, ಇಂಟರ್‌ನೆಟ್ ಸ್ಲೋ ಆಗೋದು ಇಂಥ ಪ್ರಾಬ್ಲಮ್‌ಗಳು ಆಗ್ತಿದ್ದವು.
ಈಗ ಟ್ರಾಯ್ (TRAI) ಹೊಸ ರೂಲ್ಸ್ ಮಾಡಿದೆ. ಅದರ ಪ್ರಕಾರ ಟೆಲಿಕಾಂ ಕಂಪನಿಗಳು ತಮ್ಮ ನೆಟ್‌ವರ್ಕ್ ಕವರೇಜ್ ನಕ್ಷೆಗಳನ್ನು ಆನ್‌ಲೈನ್‌ನಲ್ಲಿ ಹಾಕಬೇಕು. ಇದರಿಂದ ಜನರಿಗೆ ಯಾವ ಏರಿಯಾದಲ್ಲಿ ಯಾವ ನೆಟ್‌ವರ್ಕ್ ಸ್ಟ್ರಾಂಗ್ ಆಗಿದೆ ಅಂತ ಗೊತ್ತಾಗುತ್ತೆ.
ಏರ್‌ಟೆಲ್, ಜಿಯೋ, ವಿಐ ಕಂಪನಿಗಳು ತಮ್ಮ ವೆಬ್‌ಸೈಟ್‌ಗಳಲ್ಲಿ ಈ ನಕ್ಷೆಗಳನ್ನು ಹಾಕಿವೆ. ಏರ್‌ಟೆಲ್ ವೆಬ್‌ಸೈಟ್‌ನಲ್ಲಿ “ಸಹಾಯ ಹಸ್ತ” ಅಂತಾ ಕೊಟ್ಟಿದ್ದಾರೆ, ಅಲ್ಲಿ “ಕವರೇಜ್ ಪರಿಶೀಲಿಸಿ” ಅಂತಾ ಇದೆ. ಜಿಯೋ ವೆಬ್‌ಸೈಟ್‌ನಲ್ಲಿ “ಉಪಯುಕ್ತ ಲಿಂಕ್‌ಗಳು” ಅಂತಾ ಇದೆ, ಅಲ್ಲಿ “ಕವರೇಜ್ ನಕ್ಷೆ” ಅಂತಾ ಇದೆ. ವಿಐ ವೆಬ್‌ಸೈಟ್‌ನಲ್ಲಿ “ನಿಯಂತ್ರಕ ಮತ್ತು ತ್ವರಿತ ಪ್ರವೇಶ” ಅಂತಾ ಇದೆ, ಅಲ್ಲಿ “ನೆಟ್‌ವರ್ಕ್ ಕವರೇಜ್” ಅಂತಾ ಇದೆ.
ಈ ನಕ್ಷೆಗಳಲ್ಲಿ 2G, 3G, 4G, 5G ನೆಟ್‌ವರ್ಕ್‌ಗಳ ಬಗ್ಗೆ ಮಾಹಿತಿ ಇದೆ. ಯಾವ ಏರಿಯಾದಲ್ಲಿ ಯಾವ ನೆಟ್‌ವರ್ಕ್ ಸಿಗುತ್ತೆ ಅಂತಾ ಚೆಕ್ ಮಾಡಬಹುದು.
ಆದರೆ, ಈ ನಕ್ಷೆಗಳು ಪೂರ್ತಿಯಾಗಿ ಕರೆಕ್ಟ್ ಆಗಿ ಇರಲ್ಲ ಅಂತಾ ಟೆಲಿಕಾಂ ಕಂಪನಿಗಳು ಹೇಳಿವೆ. ಏರಿಯಾದ ಜಾಗ, ಹವಾಮಾನ, ಸಿಗ್ನಲ್ ಸ್ಟ್ರೆಂತ್, ನೆಟ್‌ವರ್ಕ್ ಚೇಂಜ್, ಕಟ್ಟಡಗಳು ಮತ್ತು ಫೋನ್ ಸೆಟ್ ಇವೆಲ್ಲಾ ನೆಟ್‌ವರ್ಕ್ ಮೇಲೆ ಪರಿಣಾಮ ಬೀರುತ್ತವೆ ಅಂತಾ ಕಂಪನಿಗಳು ಹೇಳಿವೆ.