ರಾಂಚಿ: ಜಾರ್ಖಂಡ್ ರಾಜ್ಯ ರಾಜಕೀಯ ಹೈಡ್ರಾಮಾಕ್ಕೆ ಮುಖ್ಯಮಂತ್ರಿ ಹೇಮಂತ್ ಸೊರೇನ್ ತೆರೆ ಎಳೆದಿದ್ದು, ರಾಜೀನಾಮೆ ನೀಡದಿರಲು ನಿರ್ಧಾರ ಕೈಗೊಂಡಿದ್ದಾರೆ.
ಜಾರ್ಖಂಡ್ ರಾಜಧಾನಿ ರಾಂಚಿಯಲ್ಲಿ ನಡೆದ ಶಾಸಕರ ಸಭೆಯಲ್ಲಿ ಅವರು ರಾಜೀನಾಮೆ ನೀಡದಿರುವ ನಿರ್ಧಾರ ಪ್ರಕಟಿಸಿದ್ದಾರೆ. ಭೂ ಹಗರಣ ಸಂಬಂಧ ಜಾರಿ ನಿರ್ದೇಶನಾಲಯದಿಂದ ಹೇಮಂತ್ ಅವರಿಗೆ 7 ಬಾರಿ ಸಮನ್ಸ್ ಜಾರಿಯಾಗಿದೆ. ಅವರು ಸಮನ್ಸ್ ಸ್ವೀಕರಿದ್ದರಿಂದ ಹೇಮಂತ್ ಸೊರೇನ್ ಅವರ ಪತ್ನಿ ಮುಖ್ಯಮಂತ್ರಿ ಆಗಲಿದ್ದಾರೆ ಎನ್ನುವ ವದಂತಿ ಹರಡಿತ್ತು. ಈ ವದಂತಿಗಳಿಗೆ ಜಾರ್ಖಂಡ್ ಮುಖ್ಯಮಂತ್ರಿ ಹೇಮಂತ್ ಸೊರೇನ್ ತೆರೆ ಎಳೆದಿದ್ದು, ರಾಜೀನಾಮೆ ನೀಡದಿರುವ ನಿರ್ಧಾರ ತಿಳಿಸಿದ್ದಾರೆ.
ಜಾರ್ಖಂಡ್ ಮುಕ್ತಿ ಮೋರ್ಚಾ(ಜೆಎಂಎಂ), ಕಾಂಗ್ರೆಸ್, ಆರ್‌ಜೆಡಿ ಮತ್ತು ಇತರ ಶಾಸಕರೊಂದಿಗೆ ರಾಂಚಿಯ ತಮ್ಮ ನಿವಾಸದಲ್ಲಿ ಬುಧವಾರ ಮಹತ್ವದ ಸಭೆ ನಡೆಸಿದ ಮುಖ್ಯಮಂತ್ರಿ ಹೇಮಂತ್ ಸೊರೆನ್, ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡುವುದಿಲ್ಲ ಎಂದು ಹೇಳಿದ್ದಾರೆ. ಯಾವುದೇ ಸಾಮಾಜಿಕ ಮಾಧ್ಯಮದ ವದಂತಿಗಳ ಬಗ್ಗೆ ಗಮನ ಹರಿಸದಂತೆ ಶಾಸಕರನ್ನು ಕೇಳಿಕೊಂಡಿದ್ದಾರೆ. ಶಾಸಕಾಂಗ ಸಭೆಯಲ್ಲಿ 43 ಶಾಸಕರು ಪಾಲ್ಗೊಂಡಿದ್ದರು.