ದೇವದುರ್ಗ: ಜೆಡಿಎಸ್ ಶಾಸಕಿ ಕರೆಮ್ಮ ನಿವಾಸಕ್ಕೆ ಅಪರಿಚಿತರ ಗುಂಪು ನುಗ್ಗಿದ ಘಟನೆ ರಾಯಚೂರಿನ ದೇವದುರ್ಗದ ಶಾಸಕರ ನಿವಾಸದಲ್ಲಿ ನಡೆದಿದೆ.
ನಿನ್ನೆ ತಡರಾತ್ರಿ ಅಪರಿಚಿತರ ಗುಂಪೊಂದು ಕೂಗಳತೆ ದೂರದಲ್ಲಿ ಬೈಕ್ ಗಳನ್ನು ನಿಲ್ಲಿಸಿ ಮನೆಗೆ ನುಗ್ಗಿದೆ ಎಂದು ತಿಳಿದುಬಂದಿದೆ. ಶಾಸಕಿ ಕರೆಮ್ಮ ಮನೆಯ ಮಹಡಿಯಲ್ಲಿ ಮಲಗಿದ್ದ ವೇಳೆ ಆಗಂತುಕರ ಗ್ಯಾಂಗ್ ಮನೆಗೆ ನುಗ್ಗಿದ್ದು, ಇದನ್ನು ಕಂಡ ನೆರೆಹೊರೆಯವರು ಜೋರಾಗಿ ಕೂಗಿಕೊಂಡಿದ್ದಾರೆ. ಅಕ್ಕಪಕ್ಕದವರು ಕೂಗಿಕೊಳ್ಳುತ್ತೊದ್ದಂತೆ ಗ್ಯಾಂಗ್ ಸ್ಥಳದಿಂದ ಕಾಲ್ಕಿತ್ತಿದೆ.
ತಡ ರಾತ್ರಿ ಮನೆಗೆ ನುಗ್ಗಿರುವ ಅಪರಿಚಿತ ಗ್ಯಾಂಗ್ ನಿಂದ ಆತಂಕಕ್ಕೀಡಾಗಿರುವ ಶಾಸಕಿ ಕರೆಮ್ಮ, ಈ ಬಗ್ಗೆ ತನಿಖೆ ನಡೆಸುವಂತೆ ದೇವದುರ್ಗ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.