alex Certify ಮದುವೆ ಮಾಡಿಸುವುದಾಗಿ ಮಾಜಿ ಯೋಧನಿಗೆ ವಂಚನೆ: ಮೂವರು ಅರೆಸ್ಟ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮದುವೆ ಮಾಡಿಸುವುದಾಗಿ ಮಾಜಿ ಯೋಧನಿಗೆ ವಂಚನೆ: ಮೂವರು ಅರೆಸ್ಟ್

ಮಡಿಕೇರಿ: ಮದುವೆ ಮಾಡಿಸುವುದಾಗಿ ಮಾಜಿ ಯೋಧನಿಂದ 10 ಲಕ್ಷ ರೂಪಾಯಿ ಪಡೆದು ವಂಚಿಸಿದ್ದ ಮೂವರನ್ನು ಪೊಲೀಸರು ಬಂಧಿಸಿದ್ದಾರೆ.

ಕೇರಳದ ಮಾಜಿ ಯೋಧನಿಗೆ ವಂಚಿಸಿದ್ದ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ನಿವಾಸಿ ಅಬ್ದುಲ್ ಬಶೀರ್, ಕಡಬ ನಿವಾಸಿ ಸಾಧಿಕ್, ಫೈಸುಲ್ ಬಂಧಿತ ಆರೋಪಿಗಳು. ಬಂಧಿತರಿಂದ ಮೊಬೈಲ್, ನಗದು ವಶಕ್ಕೆ ಪಡೆಯಲಾಗಿದೆ. ತಲೆಮರೆಸಿಕೊಂಡಿರುವ ಮತ್ತೊಬ್ಬ ಆರೋಪಿ ಅಮೀರ್ ಬಂಧನಕ್ಕೆ ಬಲೆ ಬೀಸಲಾಗಿದೆ.

ಕೇರಳದ ಎರ್ನಾಕುಲಂ ಜಿಲ್ಲೆಯ ಮಾಜಿ ಯೋಧ ಜಾನ್ ಮ್ಯಾಥ್ಯೂ(64) ಅವರಿಗೆ ಮದುವೆಯಾಗುವಂತೆ ಪುಸಲಾಯಿಸಿದ್ದ ಆರೋಪಿಗಳು ಮಡಿಕೇರಿಯ ರೆಸಾರ್ಟ್ ಗೆ ಕರೆಸಿಕೊಂಡು ಮಹಿಳೆಯೊಂದಿಗೆ ಮದುವೆ ಮಾಡಿಸಿದ್ದಾರೆ. ಮದುವೆಯ ಫೋಟೋ ತೆಗೆದುಕೊಂಡು ಬ್ಲಾಕ್ ಮೇಲ್ ಮಾಡಿ 10 ಲಕ್ಷ ರೂಪಾಯಿಗೆ ಬೇಡಿಕೆ ಇಟ್ಟಿದ್ದಾರೆ. 8 ಲಕ್ಷ ರೂ ನಗದು, ಎರಡು ಲಕ್ಷ ರೂಪಾಯಿ ಚೆಕ್ ಪಡೆದು ಪರಾರಿಯಾಗಿದ್ದಾರೆ.

ವಂಚನೆಗೊಳಗಾದ ಜಾನ್ ಮ್ಯಾಥ್ಯೂ ಕೊಡಗು ಪೊಲೀಸರಿಗೆ ದೂರು ನೀಡಿದ್ದು, ತನಿಖೆ ನಡೆಸಿದ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...