SHOCKING: ಸ್ಟೈಲಿಶ್ ಆಗಿ ಕಾಣಿಸಿಕೊಳ್ಳಲು ಲೆನ್ಸ್ ಹಾಕಿಕೊಂಡು ಕಣ್ಣು ಕಳೆದುಕೊಂಡ ನಟಿ

ಲೆನ್ಸ್ ಮಿಶಪ್ ಗಳಿಂದ ತನ್ನ ಕಾರ್ನಿಯಾಗಳಿಗೆ ಹಾನಿಯಾಗಿದೆ. ನಾನು ತುಂಬಾ ನೋವಿನಲ್ಲಿದ್ದೇನೆ ಎಂದು ನಟಿ ಜಾಸ್ಮಿನ್ ಭಾಸಿನ್ ಅವರು ಬಹಿರಂಗಪಡಿಸಿದ್ದಾರೆ.

ತನ್ನ ಕಾಂಟ್ಯಾಕ್ಟ್ ಲೆನ್ಸ್‌ಗಳ ಕಾರಣದಿಂದ ಕಾರ್ನಿಯಲ್ ಹಾನಿಗೊಳಗಾಗಿದೆ ಎಂದು ಅವರು ಹೇಳಿದ್ದು, ಅವರ ಅಭಿಮಾನಿಗಳು ಆಘಾತಕ್ಕೊಳಗಾಗಿದ್ದಾರೆ.

ಘಟನೆ ನಡೆದಾಗ ತಾನು ದೆಹಲಿಯಲ್ಲಿದ್ದೆ ಎಂದು ಜಾಸ್ಮಿನ್ ಬಹಿರಂಗಪಡಿಸಿದ್ದಾರೆ. ಶೋವೊಂದರಲ್ಲಿ ಭಾಗವಹಿಸಲು ತಯಾರಾಗುತ್ತಿದ್ದ ನಟಿ ಮಸೂರಗಳನ್ನು ಧರಿಸಿದಾಗ ನೋವು ಕಾಣಿಕೊಂಡಿದೆ. ತಕ್ಷಣಕ್ಕೆ ನನ್ನ ಲೆನ್ಸ್‌ ನಲ್ಲಿ ಏನೋ ತಪ್ಪಾಗಿದೆ ಎಂದು ನನಗೆ ತಿಳಿಯಲಿಲ್ಲ, ಆದರೆ, ಅದನ್ನು ಧರಿಸಿದ ನಂತರ, ನನ್ನ ಕಣ್ಣುಗಳು ನೋಯಲು ಪ್ರಾರಂಭವಾಗಿ ನೋವು ಕ್ರಮೇಣ ತೀವ್ರಗೊಂಡಿತು. ನಾನು ವೈದ್ಯರನ್ನು ನೋಡಲು ಹೋಗಬೇಕಿತ್ತು. ಆದರೆ ಕೆಲಸದ ಬದ್ಧತೆಯ ಕಾರಣ ನಾನು ಮೊದಲು ಈವೆಂಟ್‌ನಲ್ಲಿ ಭಾಗವಹಿಸಲು ಮತ್ತು ನಂತರ ವೈದ್ಯರನ್ನು ಭೇಟಿ ಮಾಡಲು ನಿರ್ಧರಿಸಿದೆ. ಈವೆಂಟ್‌ ಸಮಯದಲ್ಲಿ ನಾನು ಸನ್‌ ಗ್ಲಾಸ್‌ ಗಳನ್ನು ಧರಿಸಿದ್ದೆ. ಸ್ವಲ್ಪ ಸಮಯದ ನಂತರ ನನಗೆ ಸರಿಯಾಗಿ ನೋಡಲು ಸಾಧ್ಯವಾಗದ ಕಾರಣ ತಂಡವು ನನಗೆ ಸಹಾಯ ಮಾಡಿತು. ನಾವು ತಡರಾತ್ರಿಯಲ್ಲಿ ಕಣ್ಣಿನ ತಜ್ಞರ ಬಳಿಗೆ ಹೋದೆವು, ಅವರು ನನಗೆ ಕಾರ್ನಿಯಲ್ ಹಾನಿಯಾಗಿರುವುದನ್ನು ಪತ್ತೆಹಚ್ಚಿದರು ಮತ್ತು ನನ್ನ ಕಣ್ಣುಗಳಿಗೆ ಬ್ಯಾಂಡೇಜ್‌ಗಳನ್ನು ಹಾಕಿದರು ಎಂದು ಜಾಸ್ಮಿನ್ ತಿಳಿಸಿದ್ದಾರೆ.

ತನ್ನ ಪ್ರಸ್ತುತ ಪರಿಸ್ಥಿತಿಯ ಬಗ್ಗೆ ಅಪ್‌ಡೇಟ್ ಹಂಚಿಕೊಂಡ ಜಾಸ್ಮಿನ್, ನಾನು ತುಂಬಾ ನೋವಿನಲ್ಲಿದ್ದೇನೆ. ಇನ್ನು ನಾಲ್ಕೈದು ದಿನಗಳಲ್ಲಿ ನಾನು ಚೇತರಿಸಿಕೊಳ್ಳಬೇಕು ಎಂದು ವೈದ್ಯರು ಹೇಳಿದ್ದಾರೆ. ಆದರೆ ಅಲ್ಲಿಯವರೆಗೆ ನಾನು ನನ್ನ ಕಣ್ಣುಗಳನ್ನು ಚೆನ್ನಾಗಿ ನೋಡಿಕೊಳ್ಳಬೇಕು. ಇದು ಸುಲಭವಲ್ಲ, ನೋವಿನಿಂದ ನಿದ್ರಿಸಲು ಸಹ ಕಷ್ಟವಾಗುತ್ತದೆ ಎಂದಿದ್ದಾರೆ. ತುಂಬಾ ನೋವಿನಲ್ಲಿದ್ದರೂ, ಜಾಸ್ಮಿನ್ ಶೀಘ್ರದಲ್ಲೇ ಕೆಲಸಕ್ಕೆ ಮರಳಲು ಬಯಸಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read