ಒಸಾಕಾ: ಜಪಾನ್‌ನಲ್ಲಿ ಧೂಮಪಾನಕ್ಕೆ ಸಂಬಂಧಿಸಿದಂತೆ ಕಟ್ಟುನಿಟ್ಟಿನ ನಿಯಮಗಳಿವೆ. ಜಪಾನ್‌ನ ಒಸಾಕಾದಲ್ಲಿ ಒಬ್ಬ ವ್ಯಕ್ತಿ ಕೆಲಸದ ಸಮಯದಲ್ಲಿ ಧೂಮಪಾನ ಮಾಡಿ ಸಿಕ್ಕಿಬಿದ್ದ ನಂತರ 1.44 ಮಿಲಿಯನ್ ಯೆನ್ (ಅಂದಾಜು ರೂ. 9 ಲಕ್ಷ) ದಂಡವನ್ನು ವಿಧಿಸಲಾಗಿದೆ.
ಸ್ಟ್ರೈಟ್ಸ್ ಟೈಮ್ಸ್‌ನ ವರದಿಯ ಪ್ರಕಾರ ಸರ್ಕಾರಿ ನೌಕರನು ತನ್ನ 14 ವರ್ಷಗಳ ಕೆಲಸದ ಅವಧಿಯಲ್ಲಿ 4,500 ಕ್ಕೂ ಹೆಚ್ಚು ಬಾರಿ ಧೂಮಪಾನ ಮಾಡಿರುವುದು ತಿಳಿದುಬಂದಿದೆ. ಪ್ರಿಫೆಕ್ಚರ್‌ನ ಹಣಕಾಸು ವಿಭಾಗದಲ್ಲಿ ಕೆಲಸ ಮಾಡುತ್ತಿರುವ ವ್ಯಕ್ತಿ ಈ ಶಿಕ್ಷೆಗೆ ಗುರಿಯಾಗಿದ್ದಾನೆ.
ಅಷ್ಟೇ ಅಲ್ಲದೇ, ಹೀಗೆ ಶಿಕ್ಷೆಗೆ ಗುರಿಯಾಗುವವರಿಗೆ ಮುಂದಿನ ಆರು ತಿಂಗಳವರೆಗೆ ಶೇಕಡಾ 10 ರಷ್ಟು ವೇತನ ಕಡಿಮೆಗೊಳಿಸಲಾಗುತ್ತದೆ. ಈ ಹಿಂದೆಯೇ ಎಚ್ಚರಿಕೆ ನೀಡಿದ್ದರೂ ಅದನ್ನು ಮುಂದುವರೆಸಿದ ಕಾರಣ, ಈ ದಂಡ ವಿಧಿಸಲಾಗಿದೆ.
ಜಪಾನ್ ತನ್ನ ಶಿಸ್ತಿನ ಕೆಲಸದ ಸಂಸ್ಕೃತಿಗೆ ಹೆಸರುವಾಸಿಯಾಗಿದೆ. ಈ ಹಿಂದೆ, ದೇಶದ ಕೆಲವು ಸರ್ಕಾರಿ ನೌಕರರು ಶಿಫ್ಟ್ ಅಂತ್ಯದ ಸಮಯಕ್ಕಿಂತ 3 ನಿಮಿಷ ಮುಂಚಿತವಾಗಿ ಲಾಗ್ ಔಟ್ ಮಾಡಿದ್ದಕ್ಕಾಗಿ ಭಾರಿ ದಂಡವನ್ನು ಎದುರಿಸಬೇಕಾಗಿತ್ತು.