ಈ ಆಹಾರಕ್ಕಾಗಿ 45 ವರ್ಷ ಕಾಯ್ತಿದ್ದಾರೆ ಜನ…!

ಜಗತ್ತಿನಲ್ಲಿ ಅನೇಕ‌ ರುಚಿಕರ ಆಹಾರವಿದೆ.‌ ಜನರು ಅದನ್ನು ತಿನ್ನಲು ಎಷ್ಟು ದಿನ ಬೇಕಾದ್ರು ಕಾಯ್ತಾರೆ.‌ ಕೆಲವೊಂದು ನಿಮ್ಮ ನೆಚ್ಚಿನ ಆಹಾರ ತಿನ್ನಲು ನೀವು ದಿನವಲ್ಲ ವಾರಗಟ್ಟಲೆ ಕಾಯಬೇಕು. ಒಂದು ವಾರ ಹೆಚ್ಚು ಅಂದ್ರೆ‌ ಒಂದು‌ ತಿಂಗಳು‌ ನಾವು ಕಾಯಬಹುದು. ಆದ್ರೆ‌ ಒಂದು‌ ಆಹಾರ ಸೇವನೆ ಮಾಡಲು‌ ಜನರು‌ 43 ವರ್ಷಗಳವರೆಗೆ ಕಾಯಬೇಕು ಅಂದ್ರೆ ನೀವು ನಂಬುತ್ತೀರಾ? ನಂಬಲೇಬೇಕು.‌

ಜಪಾನ್‌ನ ರೆಸ್ಟೋರೆಂಟ್‌ನಲ್ಲಿ ವಿಶೇಷ ಖಾದ್ಯ ಸೇವನೆ ಮಾಡಲು ಜನರು 43 ವರ್ಷಗಳವರೆಗೆ ಕಾಯುವ ಸ್ಥಿತಿ ನಿರ್ಮಾಣವಾಗಿದೆ. ಜಪಾನ್‌ನ ನೆಚ್ಚಿನ, ಹೆಪ್ಪುಗಟ್ಟಿದ ಕೋಬ್ ಬೀಫ್ ಕ್ರೋಕ್ವೆಟ್‌ಗಳ ಬಾಕ್ಸ್ ಅನ್ನು ಆನಂದಿಸಲು ನೀವು ಇನ್ನು ಮುಂದೆ ನಿಖರವಾಗಿ 43 ವರ್ಷ ಕಾಯಬೇಕು.

ಇಷ್ಟಾದ್ರು ಜನರು ಇದಕ್ಕೆ ಕಾಯ್ತಿದ್ದಾರೆ. ಈ ವಿಶೇಷ ತಿಂಡಿಗಳ ಬೆಲೆ, ಪ್ರತಿ ತುಂಡಿಗೆ 300 ಯೆನ್‌ ಅಂದ್ರೆ ಸುಮಾರು 170 ರೂಪಾಯಿ ಎನ್ನಲಾಗಿದೆ.‌
ಜಪಾನ್‌ನ ಟಕಾಸಾಗೋದಲ್ಲಿ‌ ಈ ಶಾಪ್ ಇದೆ. ಹೆಪ್ಪುಗಟ್ಟಿದ ಕ್ರೋಕ್ವೆಟ್‌ಗಳಿಗಾಗಿ ನಾಲ್ಕು ದಶಕಗಳ ಕಾಯುವಿಕೆ ಪಟ್ಟಿ‌ ಇದೆ ಎಂದು‌ ವರದಿ‌‌ ಮಾಡಲಾಗಿದೆ.‌ ಇದಕ್ಕಾಗಿ 63,000 ಜನರು ಕಾಯುತ್ತಿದ್ದಾರೆ. 1926 ರಲ್ಲಿ‌ ಶುರುವಾದ ಅಂಗಡಿ ಎರಡನೇ ವಿಶ್ವ ಯುದ್ದದ ಸಮಯದಲ್ಲಿ ಹೆಚ್ಚು ಜನಪ್ರಿಯತೆ ಗಳಿಸಿತು.‌

1999 ರಲ್ಲಿ ಆನ್‌ಲೈನ್‌ನಲ್ಲಿ ಮಾರಾಟ ಶುರುವಾಗಿತ್ತು.‌ ಆದ್ರೆ ವಾರದಲ್ಲಿ‌ ಕೇವಲ‌ 200 ಆರ್ಡರನ್ನು‌ ಮಾತ್ರ ಇವರು ತಯಾರಿಸುತ್ತಿದ್ದರು. 2000ನೇ ದಶಕದ ಆರಂಭದಲ್ಲಿ ಇದು‌ ಹೆಚ್ಚು ಜನಪ್ರಿಯವಾಯಿತು. ಆರ್ಡರ್ ಪೂರ್ತಿಗೊಳಿಸಲಾಗದೆ ಕೆಲ‌ ಸಮಯ ಶಾಪ್ ಮುಚ್ಚಲಾಗಿತ್ತು.‌ ಆದ್ರೂ ಜನರು‌ ತಮ್ಮ ಆರ್ಡರ್ ಬುಕ್ ಮಾಡ್ತಿದ್ದರು.‌ ಹಾಗಾಗಿ‌ ಸಂಖ್ಯೆ ಇಷ್ಟು ದೊಡ್ಡದಾಗಿದೆ.‌

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read