alex Certify ಸ್ವರ್ಗವೇ ಧರೆಗಿಳಿದ ಅನುಭವ ನೀಡುವ ಪ್ರವಾಸಿ ತಾಣ ‘ಜಮ್ಮು’ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಸ್ವರ್ಗವೇ ಧರೆಗಿಳಿದ ಅನುಭವ ನೀಡುವ ಪ್ರವಾಸಿ ತಾಣ ‘ಜಮ್ಮು’

ಬೆಳ್ಳಿ ಬೆಟ್ಟದ ದಾರಿ, ಹಸಿರು ಕಣಿವೆ. ಝರಿಗಳು ಉದ್ಯಾನ ಹೀಗೆ ನೋಡಿದ ಕೂಡಲೇ ಸ್ವರ್ಗವೇ ಧರೆಗಿಳಿದಂತಿದೆ ಎಂಬ ಅನುಭವವನ್ನು ನೀಡುತ್ತದೆ ಜಮ್ಮು.

ಜಮ್ಮು ಕಾಶ್ಮೀರ ಎಂದ ಕೂಡಲೇ ಸೇನೆ, ಉಗ್ರರ ನಡುವೆ ಚಕಮಕಿ, ಪ್ರತ್ಯೇಕತಾವಾದಿಗಳ ಪ್ರತಿಭಟನೆ ಮೊದಲಾದವು ಮನದಲ್ಲಿ ಸುಳಿದಾಡುತ್ತವೆ. ಆದರೆ, ಜಮ್ಮು ಅದೆಲ್ಲಕ್ಕಿಂತ ಭಿನ್ನವಾಗಿ ಭಾರತದ ಪ್ರಮುಖ ಪ್ರವಾಸಿ ತಾಣಗಳಲ್ಲಿ ಒಂದಾಗಿದೆ. ಜಮ್ಮು ಮತ್ತು ಕಾಶ್ಮೀರದ ಚಳಿಗಾಲದ ರಾಜಧಾನಿಯಾಗಿರುವ ಈ ನಗರ, ವ್ಯಾಪಾರಿ ಕೇಂದ್ರವೂ ಆಗಿದೆ. ಕಾಶ್ಮೀರ ಕಣಿವೆಯ ಪ್ರವೇಶ ದ್ವಾರದಂತಿದೆ. ಜೊತೆಗೆ ಹಲವು ಸಂಸ್ಕೃತಿಗಳ ನೆಲೆವೀಡಾಗಿದೆ.

9 ನೇ ಶತಮಾನದಲ್ಲಿ ಜಂಬುಲೋಚನ ಮಹಾರಾಜ ಈ ನಗರವನ್ನು ನಿರ್ಮಿಸಿದನೆಂದು ಹೇಳಲಾಗುತ್ತದೆ. ಸೆಪ್ಟಂಬರ್ ಮತ್ತು ನಂತರದ ತಿಂಗಳುಗಳಲ್ಲಿ ಹೆಚ್ಚಿನ ಸಂಖ್ಯೆಯ ಪ್ರವಾಸಿಗರು ಇಲ್ಲಿಗೆ ಭೇಟಿ ಕೊಡುತ್ತಾರೆ.

ಜಮ್ಮು ನಗರದ ಹೃದಯಭಾಗದಲ್ಲಿರುವ ರಘುನಾಥ ಮಂದಿರ ಭವ್ಯ ದೇವಾಲಯವಾಗಿದ್ದು, ಆಕರ್ಷಣೆಯಿಂದ ಕೂಡಿದೆ. ದೇವಾಲಯದ ಶಿಲ್ಪಗಳು ನೋಡುಗರನ್ನು ಸೆಳೆಯುತ್ತವೆ. ಮತ್ತೊಂದು ಪ್ರಮುಖ ದೇವಾಲಯವೆಂದರೆ ರಣವೀರೇಶ್ವರ ಮಂದಿರ. ಪ್ರಮುಖ ಶಿವಾಲಯವಾಗಿರುವ ಈ ಮಂದಿರದಲ್ಲಿ ಶಿವಲಿಂಗಗಳಿವೆ.

ಇಲ್ಲಿನ ಅಮರ್ ಮಹಲ್ ವಸ್ತು ಸಂಗ್ರಹಾಲಯ ಎತ್ತರದ ಬೆಟ್ಟದ ಮೇಲಿದ್ದು, ಇಲ್ಲಿ ರಾಜರ ಪರಿವಾರಕ್ಕೆ ಸಂಬಂಧಿಸಿದ ಚಿತ್ರಗಳು ಹಾಗೂ ಕಲಾಕೃತಿಗಳನ್ನು ನೋಡಬಹುದಾಗಿದೆ. ಸಚಿವಾಲಯದ ಮುಂಭಾಗದಲ್ಲಿರುವ ಡೋಗ್ರಾ ಕಲಾ ಗ್ಯಾಲರಿಯಲ್ಲಿ ಡೋಗ್ರಾ ಕಲೆ ಸೇರಿದಂತೆ ಉತ್ತರ ಭಾರತದ ಅನೇಕ ಕಲಾಕೃತಿಗಳನ್ನು ಪ್ರದರ್ಶನಕ್ಕೆ ಇಡಲಾಗಿದೆ. ಇದರೊಂದಿಗೆ ಪ್ರಾಚೀನ ಮಹತ್ವ ಇರುವ ಹಲವು ವಸ್ತುಗಳನ್ನು ಇಲ್ಲಿ ಇಡಲಾಗಿದೆ.

ಒಂದು ಕಾಲದಲ್ಲಿ ರಾಜರ ಅರಮನೆಯಾಗಿ, ನಂತರ ಸಚಿವಾಲಯವಾಗಿದ್ದ ಮುಬಾರಕ್ ಮಂಡಿ ಗಮನ ಸೆಳೆಯುವ ತಾಣಗಳಲ್ಲಿ ಒಂದಾಗಿದೆ. ಬಾಹುಕೋಟೆ ಮತ್ತು ಉದ್ಯಾನ ಕೂಡ ಪ್ರವಾಸಿಗರನ್ನು ಸೆಳೆಯುತ್ತವೆ. ಇದರೊಂದಿಗೆ ಇನ್ನೂ ಹಲವು ನೋಡಬಹುದಾದ ತಾಣಗಳು ಜಮ್ಮುವಿನಲ್ಲಿವೆ.

Jammu And Kashmir Tourism, Tourist Places in Jammu And Kashmir, Jammu And Kashmir Tour and Travel Guide - Yatra

Related News

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...