BIG NEWS: ಜೈನಮುನಿ ಹತ್ಯೆ ಪ್ರಕರಣ; 500ಕ್ಕೂ ಹೆಚ್ಚು ಪುಟಗಳ ಚಾರ್ಜ್ ಶೀಟ್ ಸಲ್ಲಿಸಿದ ಸಿಐಡಿ; ಕೊಲೆಗೆ ಮತ್ತೊಂದು ಕಾರಣ ಬಹಿರಂಗ

ಬೆಳಗಾವಿ: ರಾಜ್ಯವನ್ನೇ ಬೆಚ್ಚಿ ಬೀಳಿಸಿದ್ದ ಜೈನಮುನಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸಿದ ಸಿಐಡಿ ಪೊಲೀಸರು 500ಕ್ಕೂ ಹೆಚ್ಚು ಪುಟಗಳ ಚಾರ್ಜ್ ಶೀಟ್ ನ್ನು ಕೋರ್ಟ್ ಗೆ ಸಲ್ಲಿಸಿದ್ದಾರೆ. ಜೈನಮುನಿಯನ್ನು ಹಣಕ್ಕಾಗಿ ಮಾತ್ರವಲ್ಲ ಇನ್ನೊಂದು ಕಾರಣಕ್ಕೂ ಕೊಲೆ ಮಾಡಲಾಗಿದೆ ಎಂಬುದು ಚಾರ್ಜ್ ಶೀಟ್ ನಲ್ಲಿ ಉಲ್ಲೇಖಿಸಲಾಗಿದೆ.

ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಹಿರೆಕೋಡಿ ನಂದಿಪರ್ವತ ಆಶ್ರಮದ ಜೈನಮುನಿ ಕಾಮಕುಮಾರ ನಂದಿ ಮಹಾರಾಜರನ್ನು ಜುಲೈ 5ರಂದು ಇಬ್ಬರು ದುಷ್ಕರ್ಮಿಗಳು ಕರೆಂಟ್ ಶಾಕ್ ಕೊಟ್ಟು ಬರ್ಬರವಾಗಿ ಹತ್ಯೆ ಮಾಡಿದ್ದರು. ಬಳಿಕ ಶವನ್ನು ತುಂಡರಿಸಿ ಮೂಟೆಕಟ್ಟಿ ಕಟಕಬಾವಿ ಗ್ರಾಮದ ಬಳಿ ಕೊಳವೆಬಾವಿಗೆ ಹಾಕಿದ್ದರು. ಆರೋಪಿಗಳಾದ ನಾರಾಯಣ ಮಾಳಿ ಹಾಗೂ ಹುಸೇನ್ ಡಾಲಾಯ ವಿರುದ್ಧ ಪ್ರಕರಣ ದಾಖಲಿಸಿ ತನಿಖೆ ನಡೆಸಿದ್ದ ಸಿಐಡಿ ಪೊಲೀಸರು ಇದೀಗ 500ಕ್ಕೂ ಹೆಚ್ಚು ಪುಟಗಳ ಚಾರ್ಜ್ ಶೀಟ್ ನ್ಯಾಯಾಲಯಕ್ಕೆ ಸಲ್ಲಿಸಿದ್ದಾರೆ.

ಹಣದ ವಿಚಾರವಾಗಿ ಮಾತ್ರವಲ್ಲ ಜೈನಮುನಿಯ ಬೈಗಳುವೂ ಹತ್ಯೆಗೆ ಕಾರಣವಾಯ್ತಾ ಎಂಬ ಅನುಮಾನ ಚಾರ್ಜ್ ಶೀಟ್ ನಿಂದ ಹುಟ್ಟಿಕೊಂಡಿದೆ. ಇನ್ನು ಪ್ರಕರಣ ಸಂಬಂಧ ಹತ್ತು ಮಂದಿಯ ಸಾಕ್ಷಾಧಾರಗಳನ್ನಾಗಿಸಿ 164 ಹೇಳಿಕೆಗಳ ಜೊತೆ ಟೆಕ್ನಿಕಲ್ ಎವಿಡೆನ್ಸ್ ಸಂಗ್ರಹಿಸಿ ದಾಖಲಿಸಿಕೊಂಡಿದ್ದಾರೆ.

ಜೈನಮುನಿ ಜೊತೆ ಆರೋಪಿ ನಾರಾಯಣ ಮಾಳಿ ಹೆಚ್ಚು ಒದನಾಟವಿದ್ದ. ಆರು ಲಕ್ಷ ಹಣದ ಜೊತೆ ಜೈನಮುನಿಗಳು ಆರೋಪಿಯನ್ನು ಹಿಯಾಳಿಸಿ ನಿಂದಿಸಿದ್ದರು. ಇದರಿಂದಾಗಿ ಕೋಪಗೊಂಡು ಕೊಲೆಗೆ ಸಂಚು ಮಾಡಿದ್ದರು ಎಂದು ತಿಳಿದುಬಂದಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read