ಐಷಾರಾಮಿ ಕಾರುಗಳಾದ ಲ್ಯಾಂಬೋರ್ಗಿನಿ ಹಾಗೂ ಫೆರಾರಿ ನಡುವೆ ನಡೆದ ಭೀಕರ ಅಪಘಾತದಲ್ಲಿ ಶಾರುಖ್ ಖಾನ್ ಅವರ ‘ಸ್ವದೇಸ್’ ಚಿತ್ರದಲ್ಲಿ ನಟಿಸಿದ್ದ ನಟಿ ಗಾಯತ್ರಿ ಜೋಶಿ ಹಾಗೂ ಅವರ ಪತಿ ವಿಕಾಸ್ ಒಬೆರಾಯ್ ಪವಾಡಸದೃಶವಾಗಿ ಪಾರಾಗಿದ್ದಾರೆ. ಇಟಲಿಯಲ್ಲಿ ನಡೆದ ಈ ಭೀಕರ ಅಪಘಾತ ದೃಶ್ಯದ ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.
ರಜೆ ಕಳಿಯುವ ಸಲುವಾಗಿ ದಂಪತಿಗಳು ಇಟಲಿಗೆ ತೆರಳಿದ್ದು, ಲ್ಯಾಂಬೋರ್ಗಿನಿಯಲ್ಲಿ ಪ್ರವಾಸಿ ತಾಣವೊಂದಕ್ಕೆ ಹೋಗುತ್ತಿದ್ದರು. ಇದೇ ಸಂದರ್ಭದಲ್ಲಿ ಫೆರಾರಿ ಕಾರು ಬಂದಿದ್ದು, ಮುಂದಿದ್ದ ವ್ಯಾನ್ ಹಾಗೂ ಈ ಎರಡು ವಾಹನಗಳ ನಡುವೆ ಅಪಘಾತ ಸಂಭವಿಸಿದೆ. ಇದರ ತೀವ್ರತೆಗೆ ಫೆರಾರಿ ಕಾರಿಗೆ ಬೆಂಕಿ ಹೊತ್ತಿಕೊಂಡಿದ್ದು, ಅದರಲ್ಲಿದ್ದವರು ಸಾವಿಗೀಡಾಗಿದ್ದಾರೆ.
ಸಾವಿಗೀಡಾದವರನ್ನು ಸ್ವಿಜರ್ಲ್ಯಾಂಡ್ ಮೂಲದ ಮಾರ್ಕೊಸ್ ಹಾಗೂ ಅವರ ಪತ್ನಿ ಮೆಲ್ಲಿಸ್ಸಾ ಎಂದು ಗುರುತಿಸಲಾಗಿದೆ. ಗಾಯತ್ರಿ ಜೋಶಿ ಹಾಗೂ ಅವರ ಪತಿ ವಿಕಾಸ್ ಒಬೆರಾಯ್ ಸಣ್ಣ ಪುಟ್ಟ ಗಾಯಗಳೊಂದಿಗೆ ಅಪಾಯದಿಂದ ಪಾರಾಗಿದ್ದು, ಈ ಕುರಿತಂತೆ ಮಾಧ್ಯಮವೊಂದರ ಜೊತೆ ಮಾತನಾಡಿದ ನಟಿ, ದೇವರ ದಯೆಯಿಂದ ನಾವು ಸಾವಿನ ದವಡೆಯಿಂದ ತಪ್ಪಿಸಿಕೊಂಡಿದ್ದೇವೆ ಎಂದಿದ್ದಾರೆ.
https://twitter.com/globeclip/status/1709089899192705184?ref_src=twsrc%5Etfw%7Ctwcamp%5Etweetembed%7Ctwterm%5E1709089899192705184%7Ctwgr%5E1032fb1c219ae92144c6fda979156fe9b8d688d7%7Ctwcon%5Es1_&ref_url=https%3A%2F%2Fm.dailyhunt.in%2Fnews%2Findia%2Fenglish%2Fthefreepressjournal-epaper-dhecf5ddffe11b4f36b496f4bee6e60122%2Fitalycarcrashvideoferraricollideswithlamborghiniinsardinia2dead-newsid-n543743534