ಉತ್ತಮ ಆರೋಗ್ಯ ಹಾಗೂ ಸದೃಢ ದೇಹಕ್ಕಾಗಿ ಜನ ಜಿಮ್ ಗೆ ಹೋಗ್ತಾರೆ. ಕೆಲವರಿಗೆ ಸದೃಢ ದೇಹ ಹೊಂದುವ ಆಸೆ ಸಿಕ್ಕಾಪಟ್ಟೆ ಇರುತ್ತೆ. ಹಾಗಾಗಿ ಏನೂ ತಿನ್ನದೆ ಜಿಮ್ ಗೆ ಹೋಗ್ತಾರೆ.
ಇದ್ರಿಂದ ಆರೋಗ್ಯ ಹಾಗೂ ದೇಹದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ಖಾಲಿ ಹೊಟ್ಟೆಯಲ್ಲಿ ಜಿಮ್ ಗೆ ಹೋಗುವುದು ಒಳ್ಳೆಯದಲ್ಲ. ಅಲ್ಪ ಆಹಾರ ಸೇವನೆ ಮಾಡಿ ಜಿಮ್ ಗೆ ಹೋಗುವುದು ಬೆಸ್ಟ್.
ಜಿಮ್ ಗೆ ಹೋಗುವ ಮೊದಲು ಹಾಲು ಮತ್ತು ಓಟ್ಸ್ ಸೇವನೆ ಮಾಡಿ. ಹೀಗೆ ಮಾಡುವುದರಿಂದ ದೇಹದಲ್ಲಿ ಶಕ್ತಿ ಉಳಿಯುತ್ತದೆ. ಜೀರ್ಣಕ್ರಿಯೆ ಸುಲಭವಾಗುವ ಜೊತೆಗೆ ಆರೋಗ್ಯ ಉತ್ತಮವಾಗಿರುತ್ತದೆ.
ಜಿಮ್ ಗೆ ಹೋಗುವ ಮೊದಲು ಕಾರ್ನ್ ಪ್ಲೆಕ್ಸ್ ಸೇವನೆ ಒಳ್ಳೆಯದು. ಇದ್ರಲ್ಲಿ ಫೈಬರ್ ಅಂಶ ಜಾಸ್ತಿ ಇದ್ದು, ಇದ್ರ ಜೊತೆ ಹಣ್ಣು ಸೇವನೆ ಮಾಡುವುದು ಲಾಭಕರ.
ಹೊಟ್ಟೆ ತುಂಬಿದಾಗ ವ್ಯಾಯಾಮ ಮಾಡುವುದು ಒಳ್ಳೆಯದಲ್ಲ. ಹಾಗೆ ಖಾಲಿ ಹೊಟ್ಟೆಯಲ್ಲಿ ಜಿಮ್ ಗೆ ಹೋಗುವುದೂ ಲಾಭಕರವಲ್ಲ. ಹಾಗಾಗಿ ಹೆಸರು ಬೇಳೆಯಿಂದ ಮಾಡಿದ ದೋಸೆಯನ್ನು ಸೇವನೆ ಮಾಡಿ. ಪ್ರಮಾಣ ಕಡಿಮೆ ಇರಲಿ.
ಕಾರ್ಬೋಹೈಡ್ರೇಟ್ ಅಂಶ ಜಾಸ್ತಿ ಇರುವ ಪನ್ನೀರ್ ಸ್ಯಾಂಡ್ವಿಚ್ ಸೇವನೆ ಬಹಳ ಉತ್ತಮ. ಪ್ರೋಟೀನ್ ಅಂಶ ಇದರಲ್ಲಿರುತ್ತದೆ. ಇದು ತುಂಬಾ ರುಚಿಕರ ಹಾಗೂ ಮಾಡುವುದು ಸುಲಭ.
ಒಂದು ಗ್ಲಾಸ್ ಹಾಲು ಅಥವಾ ಲಸ್ಸಿ ಸೇವನೆ ಮಾಡಿ ಜಿಮ್ ಗೆ ಹೋಗಬಹುದು.