
ಸತೀಶ್ ನೀನಾಸಂ ಹಾಗೂ ಡಿಂಪಲ್ ಕ್ವೀನ್ ರಚಿತಾ ರಾಮ್ ಅಭಿನಯದ ಸೂಪರ್ ಡೂಪರ್ ಹಿಟ್ ‘ಅಯೋಗ್ಯ’ ಸಿನಿಮಾ 2018 ಆಗಸ್ಟ್ 17ರಂದು ರಾಜ್ಯದ್ಯಂತ ತೆರೆಕಂಡಿತ್ತು.
ಈ ಚಿತ್ರ ಬಿಡುಗಡೆಯಾಗಿ ಇಂದಿಗೆ ಐದು ವರ್ಷಗಳಾಗಿವೆ. ಈ ಸಂತಸವನ್ನು ಅಯೋಗ್ಯ ಚಿತ್ರತಂಡ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದೆ. ಮಹೇಶ್ ಕುಮಾರ್ ನಿರ್ದೇಶನದ ಈ ಚಿತ್ರವನ್ನು ಕ್ರಿಸ್ಟಲ್ ಪಾರ್ಕ್ ಸಿನಿಮಾಸ್ ಬ್ಯಾನರ್ ನಡಿ ಟಿ ಆರ್ ಚಂದ್ರಶೇಖರ್ ನಿರ್ಮಾಣ ಮಾಡಿದ್ದರು.
ರೋಮ್ಯಾಂಟಿಕ್ ಕಾಮಿಡಿ ಕಥಾಹಂದರ ಹೊಂದಿರುವ ಈ ಚಿತ್ರದಲ್ಲಿ ರವಿಶಂಕರ್, ಶಿವರಾಜ್ ಕೆಆರ್ ಪೇಟೆ, ಸಾಧು ಕೋಕಿಲ, ಅರುಣ ಬಾಲರಾಜ್, ತಬಲಾ ನಾಣಿ, ಸರಿತಾ, ಕುರಿ ಪ್ರತಾಪ್ ಸೇರಿದಂತೆ ಮೊದಲಾದ ತಾರಾ ಬಳಗವಿದ್ದು, ಖ್ಯಾತ ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ಸಂಗೀತ ಸಂಯೋಜನೆ ನೀಡಿದ್ದರು.
