ನವದೆಹಲಿ: ಆಗಸ್ಟ್ 15ರ ಸ್ವಾತಂತ್ರ್ಯ ದಿನಾಚರಣೆಯಂದು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ(ಇಸ್ರೋ) ಉಪಗ್ರಹ ಉಡಾವಣೆ ಮಾಡಲಿದೆ.
ಶ್ರೀಹರಿಕೋಟಾದ ಸತೀಶ್ ಧವನ್ ಸ್ಪೇಸ್ ಸೆಂಟರ್ ನಿಂದ ಭೂ ಪರಿವೀಕ್ಷಣಾ ಮೈಕ್ರೋ ಉಪಗ್ರಹ ಇಒಎಸ್ -8 ಉಡಾವಣೆ ಮಾಡಲಾಗುವುದು. ಇದು ಇಸ್ರೋದ ಸಣ್ಣ ಗಾತ್ರದ ಉಡಾವಣೆ ವಾಹನಗಳಲ್ಲಿ ಮೂರನೇ ಹಾಗೂ ಅಂತಿಮ ಉಡಾವಣೆಯಾಗಿದೆ.
175.5 ಕೆಜಿ ತೂಕದ ಉಪಗ್ರಹ ಮೂರು ಪೆಲೋಡ್ ಗಳನ್ನು ಹೊತ್ತು ಬಾಹ್ಯಾಕಾಶಕ್ಕೆ ಜಿಗಿಯಲಿದೆ. ಒಂದು ವರ್ಷದವರೆಗೆ ಉಪಗ್ರಹ ಕಾರ್ಯನಿರ್ವಹಿಸಲಿದ್ದು, ಕೆಳಮಟ್ಟದ ಕಕ್ಷೆಯಲ್ಲಿ ಸುತ್ತಾಡುತ್ತಾ ವಿಪತ್ತು ನಿರ್ವಹಣೆಯಲ್ಲಿ ಮಣ್ಣಿನ ತೇವಾಂಶದ ಬಗ್ಗೆ ಅಧ್ಯಯನಕ್ಕೆ ನೆರವಾಗುತ್ತದೆ ಎಂದು ಹೇಳಲಾಗಿದೆ.