ಜೆರುಸಲೇಂ: ಯಾರು ನಮಗೆ ಹಾನಿ ಮಾಡುತ್ತಾರೋ ನಾವು ಅವರಿಗೆ ಹಾನಿ ಮಾಡುತ್ತೇವೆ ಎಂದು ಡ್ರೋನ್ ದಾಳಿಯ ನಂತರ ಹಿಜ್ಬುಲ್ಲಾಗೆ ಇಸ್ರೇಲ್ ಪ್ರಧಾನಿ ನೆತನ್ಯಾಹು ನಿಷ್ಠುರ ಸಂದೇಶ ರವಾನಿಸಿದ್ದಾರೆ.
ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರು ಭಾನುವಾರ ಹೆಜ್ಬೊಲ್ಲಾಗೆ ದೃಢ ಸಂದೇಶವನ್ನು ಕಳುಹಿಸಿದ್ದು, ದೇಶವು ತನ್ನನ್ನು ತಾನು ರಕ್ಷಿಸಿಕೊಳ್ಳಲು ಅಗತ್ಯವಿರುವ ಎಲ್ಲಾ ಕ್ರಮಗಳನ್ನು ತೆಗೆದುಕೊಳ್ಳುತ್ತದೆ ಎಂದು ಹೇಳಿದ್ದಾರೆ.
ಹಿರಿಯ ಕಮಾಂಡರ್‌ನ ಹತ್ಯೆಗೆ ಪ್ರತೀಕಾರವಾಗಿ ಇರಾನ್ ಬೆಂಬಲಿತ ಹಿಜ್ಬುಲ್ಲಾ ನೂರಾರು ರಾಕೆಟ್‌ಗಳು ಮತ್ತು ಡ್ರೋನ್‌ಗಳನ್ನು ಇಸ್ರೇಲ್‌ನಲ್ಲಿ ಉಡಾವಣೆ ಮಾಡಿದ ಕೆಲವೇ ನಿಮಿಷಗಳಲ್ಲಿ ನೆತನ್ಯಾಹು ಅವರಿಂದ ಕಟ್ಟುನಿಟ್ಟಿನ ಸಂದೇಶ ಬಂದಿದೆ.
ನಮ್ಮ ದೇಶವನ್ನು ರಕ್ಷಿಸಲು, ನಿವಾಸಿಗಳನ್ನು ಸುರಕ್ಷಿತವಾಗಿ ಅವರ ಮನೆಗಳಿಗೆ ಹಿಂದಿರುಗಿಸಲು ನಾವು ಎಲ್ಲವನ್ನೂ ಮಾಡಲು ನಿರ್ಧರಿಸಿದ್ದೇವೆ. ಯಾರು ನಮಗೆ ಹಾನಿ ಮಾಡುತ್ತಾ ನಾವು ಅವರಿಗೆ ಹಾನಿ ಮಾಡುತ್ತೇವೆ ಎಂದು ಅವರು ಹೇಳಿದ್ದಾರೆ.
ಉತ್ತರ ಇಸ್ರೇಲ್ ನಾದ್ಯಂತ ವಾಯುದಾಳಿ ಸೈರನ್ ಮೊಳಗಿದೆ. ದಾಳಿಯ ಬೆದರಿಕೆಯಿಂದಾಗಿ ಇಸ್ರೇಲ್‌ನ ಬೆನ್-ಗುರಿಯನ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣವನ್ನುಸುಮಾರು ಒಂದು ಗಂಟೆಗಳ ಕಾಲ ಬಂದ್ ಮಾಡಲಾಗಿತ್ತು.