ಗಾಜಾ ಪಟ್ಟಿಯಲ್ಲಿ ಮತ್ತೆ ಹಮಾಸ್ ಉಗ್ರರ ಮೇಲೆ ಇಸ್ರೇಲ್ ಸೇನೆ ದಾಳಿ ನಡೆಸಿದೆ. ಕದನ ವಿರಾಮ ಮುಕ್ತಾಯದ ಬೆನ್ನಲ್ಲೇ ಇಸ್ರೇಲ್ ಸೇನೆಯಿಂದ ಕ್ಷಿಪಣಿ ದಾಳಿ ನಡೆಸಲಾಗಿದೆ. ಇಸ್ರೇಲ್ ದಾಳಿಯಿಂದಾಗಿ ಗಾಜಾ ಪಟ್ಟಿಯಲ್ಲಿ 178ಕ್ಕೂ ಹೆಚ್ಚು ಜನ ಸಾವನ್ನಪ್ಪಿದ್ದಾರೆ.
ಹಮಾಸ್ ನೊಂದಿಗಿನ ಕದನ ವಿರಾಮ ಒಪ್ಪಂದದ ಮುಕ್ತಾಯದ ನಂತರ ಗಾಜಾದ ಮೇಲೆ ಇಸ್ರೇಲಿ ನಡೆಸಿದ ನವೀಕೃತ ಬಾಂಬ್ ದಾಳಿಯಲ್ಲಿ ಸುಮಾರು 180 ಪ್ಯಾಲೆಸ್ಟೀನಿಯಾದವರು ಸಾವನ್ನಪ್ಪಿದ್ದಾರೆ ಎಂದು ಪ್ಯಾಲೇಸ್ಟಿನಿಯನ್ ಆರೋಗ್ಯ ಅಧಿಕಾರಿಗಳು ಹೇಳಿದ್ದಾರೆ.
ದಕ್ಷಿಣ ಮತ್ತು ಮಧ್ಯ ಇಸ್ರೇಲ್‌ನ ನಗರಗಳ ಕಡೆಗೆ ರಾಕೆಟ್‌ಗಳನ್ನು ಉಡಾಯಿಸುವುದನ್ನು ಿಸ್ರೇನ್ ಸೇನೆಯವರು ಪುನರಾರಂಭಿಸಿದ್ದಾರೆ ಎಂದು ಹಮಾಸ್ ಮತ್ತು ಪ್ಯಾಲೇಸ್ಟಿನಿಯನ್ ತಿಳಿಸಿದ್ದು, ರಫಾ ಗಡಿ ದಾಟುವ ಮೂಲಕ ಸಹಾಯ ಟ್ರಕ್ ಗಳನ್ನು ಗಾಜಾಕ್ಕೆ ಪ್ರವೇಶಿಸುವುದನ್ನು ಇಸ್ರೇಲಿ ಪಡೆಗಳು ತಡೆಯುತ್ತಿವೆ ಎಂದು ಪ್ಯಾಲೇಸ್ಟಿನಿಯನ್ ರೆಡ್ ಕ್ರೆಸೆಂಟ್ ಹೇಳಿದೆ.
ಮಧ್ಯವರ್ತಿಗಳಾದ ಕತಾರ್, ಈಜಿಪ್ಟ್ ಮತ್ತು ಯುನೈಟೆಡ್ ಸ್ಟೇಟ್ಸ್ ಅವರು ಗಾಜಾದಲ್ಲಿ ಮಾನವೀಯ ಕದನ ವಿರಾಮವನ್ನು ಮರುಸ್ಥಾಪಿಸಲು ಕೆಲಸ ಮಾಡುತ್ತಿದ್ದಾರೆ. ದಕ್ಷಿಣ ಲೆಬನಾನ್ ನಲ್ಲಿರುವ ಹುಲಾ ಪಟ್ಟಣದ ಮೇಲೆ ಇಸ್ರೇಲಿ ಫಿರಂಗಿಗಳ ದಾಳಿ ನಡೆದಿದೆ.