BIG NEWS: ಗಾಜಾ ಪಟ್ಟಿಯನ್ನು ಸಂಪೂರ್ಣ ನಿಯಂತ್ರಣಕ್ಕೆ ಪಡೆದ ಇಸ್ರೇಲ್ ಸೇನೆ

ಇಸ್ರೇಲ್ ಸೇನೆ ಗಾಜಾ ಪಟ್ಟಿಯನ್ನು ಸಂಪೂರ್ಣ ನಿಯಂತ್ರಣಕ್ಕೆ ಪಡೆದುಕೊಂಡಿದೆ. ನಿನ್ನೆ ರಾತ್ರಿಯಿಂದ ಗಾಜಾ ಪಟ್ಟಿಯಿಂದ ಯಾವುದೇ ದಾಳಿ ನಡೆದಿಲ್ಲ ಎಂದು ಇಸ್ರೇಲ್ ಪ್ರಧಾನ ಮಂತ್ರಿ ಬೆಂಜಮಿನ ನೆತನ್ಯಾಹು ಹೇಳಿಕೆ ನೀಡಿದ್ದಾರೆ.

ಅಮೆರಿಕದಿಂದ ನಮಗೆ ಎಲ್ಲಾ ಸಹಕಾರ ಸಿಗುತ್ತಿದೆ. ನಮ್ಮ ಸೇನೆ ಗಾಜಾ ಪಟ್ಟಿಯ ಮೇಲೆ ಸಂಪೂರ್ಣ ನಿಯಂತ್ರಣ ಸಾಧಿಸಿದೆ ಎಂದು ತಿಳಿಸಿದ್ದಾರೆ.

ಹಮಾಸ್ ಉಗ್ರಗಾಮಿಗಳು ಇಸ್ರೇಲ್‌ ಸಮುದಾಯಗಳ ಮೇಲೆ ವಿಧ್ವಂಸಕ ದಾಳಿ ಪ್ರಾರಂಭಿಸಿದ ನಂತರ ಹೋರಾಟವು ನಾಲ್ಕನೇ ದಿನಕ್ಕೆ ಕಾಲಿಟ್ಟಿದೆ. ದಾಳಿಯಲ್ಲಿ ಕನಿಷ್ಠ 900 ಇಸ್ರೇಲಿಗಳು ಕೊಲ್ಲಲ್ಪಟ್ಟರು. ಇಸ್ರೇಲಿ ಭದ್ರತಾ ಪಡೆ ನಡೆಸಿದ ಪ್ರತಿಕಾರದ ದಾಳಿಯಲ್ಲಿ ಗಾಜಾದಲ್ಲಿ ಇದಕ್ಕಿಂತ ಹೆಚ್ಚು ಜನ ಸಾವನ್ನಪ್ಪಿದ್ದಾರೆ ಎಂದು ಪ್ಯಾಲೇಸ್ತೀನ್ ಅಧಿಕಾರಿಗಳು ತಿಳಿಸಿದ್ದಾರೆ.

ಗಡಿ ಬೇಲಿಯ ಮೇಲೆ ಹೆಚ್ಚು ಕಡಿಮೆ ಸಂಪೂರ್ಣ ನಿಯಂತ್ರಣ ಮರುಸ್ಥಾಪಿಸಲಾಗಿದೆ. ಗಡಿ ಪ್ರದೇಶದ ಸುತ್ತಲಿನ ಇಸ್ರೇಲಿ ಪಟ್ಟಣಗಳನ್ನು ಭದ್ರಪಡಿಸಲಾಗಿದೆ ಎಂದು ಹೇಳಲಾಗಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read