ಮದುವೆ ಸಂಭ್ರಮದಲ್ಲಿ ‘ಲುಂಗಿ ಡ್ಯಾನ್ಸ್’ ಗೆ ಕುಣಿದು ಕುಪ್ಪಳಿಸಿದ ಅಮೀರ್ ಖಾನ್ ಅಳಿಯ; ವಿಡಿಯೋ ವೈರಲ್

ಅಮೀರ್ ಖಾನ್ ಅವರ ಪುತ್ರಿ ಇರಾ ಖಾನ್ ಫಿಟ್ನೆಸ್ ತರಬೇತುದಾರ ನೂಪುರ್ ಶಿಖರೆ ಅವರ ಕೈಹಿಡಿದಿದ್ದು ಸಾಂಪ್ರದಾಯಿಕ ಮದುವೆ ಸಮಾರಂಭ ರಾಜಸ್ಥಾನದ ಉದಯಪುರದಲ್ಲಿ ನಡೆಯುತ್ತಿದೆ. ಈ ವಿವಾಹ ಸಮಾರಂಭ ಪೂರ್ವದ ಸಂಭ್ರಮದಲ್ಲಿ ನವಜೋಡಿ ಸೋಮವಾರ ತಮ್ಮ ಕುಟುಂಬ ಸದಸ್ಯರು ಮತ್ತು ಆತ್ಮೀಯ ಗೆಳೆಯರೊಂದಿಗೆ ಪಾರ್ಟಿಯಲ್ಲಿ ಕುಣಿದಿದ್ದಾರೆ.

ವಿಶೇಷವಾಗಿ ಅಮೀರ್ ಖಾನ್ ಅಳಿಯ ನೂಪುರ್ ಶಿಖರೆ, ಬಾಲಿವುಡ್ ಬಾದ್ ಶಾ ಶಾರುಖ್ ಖಾನ್ ಅಭಿನಯದ ‘ಚೆನ್ನೈ ಎಕ್ಸ್ ಪ್ರೆಸ್’ ಚಿತ್ರದ ಲುಂಗಿ ಡ್ಯಾನ್ಸ್ ಲುಂಗಿ ಡ್ಯಾನ್ಸ್ ಹಾಡಿಗೆ ಲುಂಗಿ ತೊಟ್ಟು ನೃತ್ಯ ಮಾಡಿದ್ದಾರೆ. ಮತ್ತೊಂದು ವೀಡಿಯೊದಲ್ಲಿ ಇರಾ ಮತ್ತು ನೂಪುರ್, ರಿಹಾನ್ನಾ ಅವರ ಡೋಂಟ್ ಸ್ಟಾಪ್ ದಿ ಮ್ಯೂಸಿಕ್ ಹಾಡಿಗೆ ನೃತ್ಯ ಮಾಡಿದ್ದಾರೆ.

ಸೋಮವಾರ ನವಜೋಡಿಯ ಮೆಹೆಂದಿ ಸಮಾರಂಭದ ಹಲವಾರು ಚಿತ್ರಗಳು ಸಾಮಾಜಿಕ ಜಾಲತಾಣದಲ್ಲಿ ಕಾಣಿಸಿಕೊಂಡವು. ಇರಾ ಮತ್ತು ನೂಪುರ್ ಜನವರಿ 3 ರಂದು ಮುಂಬೈನಲ್ಲಿ ಆಪ್ತರ ಸಮ್ಮುಖದಲ್ಲಿ ತಮ್ಮ ಮದುವೆಯನ್ನು ನೋಂದಾಯಿಸಿಕೊಂಡು ಪ್ರತಿಜ್ಞೆ ಸ್ವೀಕರಿಸಿದರು.

ಮಾಧ್ಯಮ ವರದಿಗಳ ಪ್ರಕಾರ ಇರಾಖಾನ್ ಮತ್ತು ನೂಪುರ್ ಶಿಖರೆ ಇಂದು ಸಂಜೆ ಸಂಗೀತ ಸಮಾರಂಭವನ್ನು ಆಯೋಜಿಸಲಿದ್ದಾರೆ. ವರದಿಯ ಪ್ರಕಾರ ರಾಜಸ್ಥಾನದಲ್ಲಿ ಅವರ ವಿವಾಹದ ನಂತರ ಇರಾ ಮತ್ತು ನೂಪುರ್ ಮುಂಬೈನಲ್ಲಿ ಭವ್ಯವಾದ ಆರತಕ್ಷತೆಯನ್ನು ಆಯೋಜಿಸಲಿದ್ದಾರೆ. ಜನವರಿ 13 ರಂದು ಮುಂಬೈನ ನೀತಾ ಮುಖೇಶ್ ಅಂಬಾನಿ ಕಲ್ಚರಲ್ ಸೆಂಟರ್ ನಲ್ಲಿ ಆರತಕ್ಷತೆ ನಡೆಯಲಿದೆ.

ಹಲವಾರು ವರ್ಷಗಳ ಡೇಟಿಂಗ್ ನಂತರ ಇರಾ ಮತ್ತು ನೂಪುರ್ ನವೆಂಬರ್ 2023 ರ ಆಗಸ್ಟ್ ನಲ್ಲಿ ನಿಶ್ಚಿತಾರ್ಥ ಮಾಡಿಕೊಂಡಿದ್ದರು.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read