ಜ್ಯುವೆಲ್ಲರಿ ಅಂಗಡಿಯೊಂದರಲ್ಲಿ ಪ್ರದರ್ಶನಕ್ಕೆ ಇಡಲಾಗಿದ್ದ ನೆಕ್ಲೇಸ್ ಅನ್ನು ಇಲಿಯೊಂದು ಕದಿಯುತ್ತಿರುವ ವಿಡಿಯೋ ಆನ್‌ಲೈನ್‌ನಲ್ಲಿ ವೈರಲ್ ಆಗಿದೆ. ವೈರಲ್ ಆಗಿರುವ ವಿಡಿಯೋವನ್ನು ಐಪಿಎಸ್ ಅಧಿಕಾರಿ ರಾಜೇಶ್ ಹಿಂಗಾಂಕರ್ ಅವರು ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದಾರೆ.
30 ಸೆಕೆಂಡ್‌ಗಳ ಸಿಸಿ ಕ್ಯಾಮೆರಾ ದೃಶ್ಯಾವಳಿಯಲ್ಲಿ, ಆಭರಣ ಅಂಗಡಿಯಲ್ಲಿ ಪ್ರದರ್ಶನದಲ್ಲಿರುವ ನೆಕ್ಲೇಸ್ ಅನ್ನು ಇಲಿ ಕದಿಯುತ್ತಿರುವುದನ್ನು ಕಾಣಬಹುದು. “ಈ ಇಲಿ ಯಾರಿಗಾಗಿ ವಜ್ರದ ಹಾರವನ್ನು ತೆಗೆದುಕೊಂಡಿದೆ” ಎಂದು ಟ್ವಿಟರ್ ನಲ್ಲಿ ಶೀರ್ಷಿಕೆ ಹಾಕಿ ಕೇಳಲಾಗಿದೆ.