ಬೆಂಗಳೂರು: ದೇಶದ ಸ್ಟಾರ್ಟ್ ಅಪ್‌ಗಳ ರಾಜಧಾನಿ ಖ್ಯಾತಿಯ ಬೆಂಗಳೂರಿನಲ್ಲಿ ಪ್ರತ್ಯೇಕ ಸ್ಟಾರ್ಟ್ ಅಪ್ ಪಾರ್ಕ್ ಸ್ಥಾಪಿಸಲಾಗುವುದು ಎಂದು ಕೈಗಾರಿಕೆ ಸಚಿವ ಎಂ.ಬಿ.ಪಾಟೀಲ್ ತಿಳಿಸಿದ್ದಾರೆ.
ಸ್ಟಾರ್ಟ್ ಅಪ್ ಪಾರ್ಕ್ ಅನ್ನು ಜಪಾನ್, ದಕ್ಷಿಣ ಕೊರಿಯಾ ಮಾದರಿಯಲ್ಲಿ ಅಭಿವೃದ್ಧಿಪಡಿಸುವುದಲ್ಲದೇ, ನವೋದ್ಯಮಗಳ ಅಗತ್ಯಕ್ಕೆ ತಕ್ಕಂತೆ ನಿವೇಶನ ಒದಗಿಸಲಾಗುವುದು. ಇಲ್ಲಿ ಸಕಲ ಸೌಲಭ್ಯವುಳ್ಳ, ಸುಸಜ್ಜಿತ ಕಚೇರಿಗಳಿರಲಿದ್ದು, ಪ್ರತಿಭಾನ್ವಿತ ನವೋದ್ಯಮಿಗಳು ತಮ್ಮ ವಿನೂತನ ಆಲೋಚನೆ ಸುಲಲಿತವಾಗಿ ಕಾರ್ಯಗತಗೊಳಿಸಲು ಪೂರಕವಾದ ಪರಿಸರ ಕಲ್ಪಿಸಿಕೊಡಲಾಗುವುದು ಎಂದು ಮಾಹಿತಿ ನೀಡಿದ್ದಾರೆ.