ಜಗತ್ತಿನ ಅತ್ಯಂತ ಸಕ್ರಿಯ ಜ್ವಾಲಾಮುಖಿಗಳಲ್ಲಿ ಒಂದಾದ ಇಂಡೋನೇಷ್ಯಾದ ಮೌಂಟ್ ಮೆರಾಪಿ ಶನಿವಾರ ಜ್ವಾಲಾಮುಖಿ ಭುಗಿಲೆದ್ದಿದ್ದು, ಅದರಿಂದ ಹೊರಹೊಮ್ಮಿದ ಹೊಗೆ ಮತ್ತು ಬೂದಿ ಅಕ್ಕಪಕ್ಕದ ಹಳ್ಳಿಗಳನ್ನು ಆವರಿಸಿದೆ.
ಘಟನೆಯಲ್ಲಿ ಯಾವುದೇ ಸಾವು ನೋವುಗಳ ಕುರಿತು ಇನ್ನೂ ಯಾವುದೇ ವರದಿಗಳು ಬಂದಿಲ್ಲ ಎಂದು ದೇಶದ ವಿಪತ್ತು ನಿರ್ವಹಣಾ ಸಂಸ್ಥೆ ತಿಳಿಸಿದೆ.
ಸ್ಥಳೀಯ ಸುದ್ದಿವಾಹಿನಿ ಕೊಂಪಾಸ್ ಟಿವಿಯಲ್ಲಿ, ಇಂಡೋನೇಷ್ಯಾದ ರಾಜಧಾನಿ ಯೋಗ್ಯಕರ್ತದ ಬಳಿಯ ಜಾವಾ ದ್ವೀಪದಲ್ಲಿರುವ ಹಳ್ಳಿಯೊಂದರಲ್ಲಿ ಬೂದಿಯಿಂದ ಮುಚ್ಚಲ್ಪಟ್ಟ ಮನೆಗಳು ಮತ್ತು ರಸ್ತೆಗಳು ಚಿತ್ರಣವನ್ನು ನೋಡಬಹುದಾಗಿದೆ.
ಈ ಬೂದಿಯು 3,000 ಮೀ (96,000 ಅಡಿ) ಎತ್ತರಕ್ಕೆ ಚಿಮ್ಮಬಲ್ಲದು ಎಂದು ಜ್ವಾಲಾಮುಖಿ ವೀಕ್ಷಣಾಲಯದ ಮೂಲಗಳು ತಿಳಿಸಿವೆ.
ಸಂಭವನೀಯ ಅಫಘಾತ ವಲಯದಲ್ಲಿ ಜರುಗುವ ಘಟನೆಗಳನ್ನು ಸೂಕ್ಷ್ಮವಾಗಿ ಗಮನಿಸುವಂತೆ ಸಾರ್ವಜನಿಕರಿಗೆ ಇದೇ ವೇಳೆ ಸೂಚನೆಗಳನ್ನು ನೀಡಲಾಗಿದೆ. ಅದರಲ್ಲೂ ಜ್ವಾಲಾಮುಖಿಯಿಂದ ಏಳುವ ಬೂದಿ ಹಾಗೂ ಕೆಂಡದ ಬದಿಗಳು ಮಳೆ ನೀರಿನಿಂದ ಎಲ್ಲೆಂದರಲ್ಲಿ ಹಬ್ಬಬಹುದು ಎಂದು ವಿಶೇಷ ಎಚ್ಚರಿಕೆಯನ್ನೂ ನೀಡಲಾಗಿದೆ.