alex Certify ಪ್ರತಿದಿನ ಭಾರತೀಯರನ್ನು ಕಾಡುತ್ತಿವೆ ಅನುಪಯುಕ್ತ ಮೊಬೈಲ್‌ ಕರೆಗಳು; ಸಮೀಕ್ಷೆಯಲ್ಲಿ ಬಯಲಾಗಿದೆ ಶಾಕಿಂಗ್‌ ಸಂಗತಿ….! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಪ್ರತಿದಿನ ಭಾರತೀಯರನ್ನು ಕಾಡುತ್ತಿವೆ ಅನುಪಯುಕ್ತ ಮೊಬೈಲ್‌ ಕರೆಗಳು; ಸಮೀಕ್ಷೆಯಲ್ಲಿ ಬಯಲಾಗಿದೆ ಶಾಕಿಂಗ್‌ ಸಂಗತಿ….!

ಬೇಡದ ಕರೆಗಳು ಎಲ್ಲರಿಗೂ ಬರುತ್ತವೆ. ಕಸ್ಟಮರ್‌ ಕೇರ್‌ಗಳಿಂದ, ಅನೇಕ ಉತ್ಪನ್ನಗಳ ಪ್ರಚಾರಕ್ಕಾಗಿ ಇವುಗಳ ಜೊತೆಗೆ ಆನ್‌ಲೈನ್‌ ವಂಚಕರಿಂದಲೂ ಫೋನ್‌ ಕರೆಗಳು ಬರುತ್ತಲೇ ಇರುತ್ತವೆ. ಸಮೀಕ್ಷೆಯ ಪ್ರಕಾರ ಕಳೆದ ವರ್ಷ ಭಾರತದಲ್ಲಿ 60 ಪ್ರತಿಶತಕ್ಕಿಂತ ಹೆಚ್ಚು ಜನರು ಪ್ರತಿದಿನ ಸರಾಸರಿ ಮೂರು ಅಥವಾ ಅದಕ್ಕಿಂತಲೂ ಹೆಚ್ಚು ಅನುಪಯುಕ್ತ, ಸ್ಪ್ಯಾಮ್ ಕರೆಗಳನ್ನು ಸ್ವೀಕರಿಸಿದ್ದಾರೆ. ಈ ಸಮೀಕ್ಷೆಯಲ್ಲಿ 378 ಜಿಲ್ಲೆಗಳ 60,000 ಜನರ ಡೇಟಾ ಪಡೆಯಲಾಗಿದೆ.

30 ಪ್ರತಿಶತ ಜನರು ಪ್ರತಿದಿನ ಸರಾಸರಿ ಒಂದು ಅಥವಾ ಎರಡು ಸ್ಪ್ಯಾಮ್ ಕರೆಗಳನ್ನು ಸ್ವೀಕರಿಸುತ್ತಾರೆ ಎಂದು ಸಮೀಕ್ಷೆ  ಬಹಿರಂಗಪಡಿಸಿದೆ. ಆದರೆ ಶೇ.36ರಷ್ಟು ಜನರು ಪ್ರತಿದಿನ ಕನಿಷ್ಠ 3-5 ಸ್ಪ್ಯಾಮ್ ಕರೆಗಳನ್ನು ಸ್ವೀಕರಿಸುತ್ತಾರೆ. 21 ಪ್ರತಿಶತದಷ್ಟು ಬಳಕೆದಾರರಿಗೆ ಪ್ರತಿದಿನ 6 ರಿಂದ 10 ಅನುಪಯುಕ್ತ ಕರೆಗಳು ಬಂದಿವೆ. ಆದರೆ ಶೇ.3ರಷ್ಟು ಮಂದಿಗೆ 10 ಕ್ಕೂ ಹೆಚ್ಚು ಅನುಪಯುಕ್ತ ಕರೆಗಳನ್ನು ಮಾಡಲಾಗಿದೆ. 6 ಪ್ರತಿಶತದಷ್ಟು ಬಳಕೆದಾರರಿಗೆ ಮಾತ್ರ ಇಂತಹ ಕರೆಗಳು ಬಂದಿಲ್ಲ.

ವರ್ಷದಿಂದ ವರ್ಷಕ್ಕೆ ಈ ಅನುಪಯುಕ್ತ ಕರೆಗಳನ್ನು ಸ್ವೀಕರಿಸುವವರ ಸಂಖ್ಯೆ ಕಡಿಮೆಯಾಗುತ್ತಿದೆ ಎಂಬುದು ಗಮನಾರ್ಹ. ಪ್ರತಿದಿನ ಕನಿಷ್ಠ 3 ಅನುಪಯುಕ್ತ ಕರೆಗಳನ್ನು ಸ್ವೀಕರಿಸುವವರ ಸಂಖ್ಯೆ ಇಳಿಕೆಯಾಗಿದೆ. ಕಳೆದ ವರ್ಷ ಫೆಬ್ರವರಿಯಲ್ಲಿ 66 ಪ್ರತಿಶತ ಜನರು ಪ್ರತಿದಿನ 3ಕ್ಕೂ ಹೆಚ್ಚು ಅನುಪಯುಕ್ತ ಕರೆಗಳನ್ನು ಸ್ವೀಕರಿಸಿದ್ದರು. ಆದರೆ ಈಗ ಕಳೆದ 12 ತಿಂಗಳಲ್ಲಿ ಇದು 60 ಪ್ರತಿಶತಕ್ಕೆ ಇಳಿದಿದೆ.

ದೂರಸಂಪರ್ಕ ಇಲಾಖೆಯ ನಿಯಮಗಳು ಸರಿಯಾಗಿ ಜಾರಿಯಾದರೆ ಅನುಪಯುಕ್ತ ಕರೆಗಳ ಸಮಸ್ಯೆ ಮತ್ತಷ್ಟು ಕಡಿಮೆಯಾಗಬಹುದು. ಸಮೀಕ್ಷೆಯಲ್ಲಿ ಭಾಗವಹಿಸಿದ ಶೇ.90 ರಷ್ಟು ಜನರು ತಮ್ಮ ಸಂಖ್ಯೆಯನ್ನು ‘ಡೋಂಟ್ ಡಿಸ್ಟರ್ಬ್’ (ಡಿಎನ್‌ಡಿ) ಪಟ್ಟಿಯಲ್ಲಿ ನೋಂದಾಯಿಸಿದ್ದರೂ, ಇನ್ನೂ ಅನೇಕ ಅನುಪಯುಕ್ತ ಕರೆಗಳು ಬರುತ್ತಿವೆ ಎಂದು ಹೇಳಿದ್ದಾರೆ.

ವರದಿಯ ಪ್ರಕಾರ 76 ಪ್ರತಿಶತದಷ್ಟು ಜನರಿಗೆ ಇಂತಹ ಕರೆಗಳು ಹಣಕಾಸು ಕಂಪನಿಗಳು ಮತ್ತು ಆಸ್ತಿ ಮಾರಾಟ ಕಂಪನಿಗಳಿಂದ ಬರುತ್ತವೆ. ವರದಿಯ ಪ್ರಕಾರ ಶೇ. 36ರಷ್ಟು ಜನರು ಕೆಲವು ಕಂಪನಿ ಅಥವಾ ಬ್ರ್ಯಾಂಡ್‌ನ ಮೊಬೈಲ್ ಸಂಖ್ಯೆಗಳಿಂದ ಅನುಪಯುಕ್ತ ಕರೆಗಳನ್ನು ಸ್ವೀಕರಿಸುತ್ತಾರೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...