ಈ ದಿನಾಂಕದಂದು ಸಂಭವಿಸುತ್ತೆ 3ನೇ ಮಹಾಯುದ್ಧ; ನಿಖರ ದಿನಾಂಕದ ಮುನ್ಸೂಚನೆ ನೀಡಿದ ಭಾರತದ ಖ್ಯಾತ ಜ್ಯೋತಿಷಿ

ಜಗತ್ತಿನಲ್ಲೀಗ ಇಸ್ರೇಲ್ ಮತ್ತು ಹಮಾಸ್ ಬಂಡುಕೋರರ ನಡುವಿನ ಯುದ್ಧ ಒಂದೆಡೆಯಾದರೆ , ರಷ್ಯಾ ಮತ್ತು ಉಕ್ರೇನ್ ನಡುವಿನ ಯುದ್ಧ ವರ್ಷಗಟ್ಟಲೆ ನಡೆಯುತ್ತಿದೆ. ಟೆಹ್ರಾನ್‌ನಲ್ಲಿ ಇಸ್ರೇಲಿ ಪಡೆಗಳಿಂದ ಹಮಾಸ್ ಕಮಾಂಡರ್-ಇನ್-ಚೀಫ್ ಇಸ್ಮಾಯಿಲ್ ಹನಿಯೆಹ್ ಹತ್ಯೆಯು ಇರಾನ್ ಸರ್ಕಾರದಿಂದ ತೀವ್ರ ಪ್ರತಿಕ್ರಿಯೆಯನ್ನು ಹುಟ್ಟುಹಾಕಿದ್ದು ಮತ್ತಷ್ಟು ಗಂಭೀರ, ಭೀಕರ ಸ್ವರೂಪದ ಯುದ್ಧದ ಕರಿನೆರಳು ಆವರಿಸಿದೆ. ಮತ್ತೊಮ್ಮೆ ವಿಶ್ವಯುದ್ಧ ಸಂಭವಿಸುತ್ತದೆಯಾ ಎಂಬ ಭೀತಿಯ ನಡುವೆ ಭಾರತೀಯ ಮೂಲಕ ಜ್ಯೋತಿಷಿ ಮೂರನೇ ಮಹಾಯುದ್ಧ ಸಂಭವಿಸುತ್ತೆ ಎಂದು ನಿಖರ ದಿನಾಂಕವನ್ನೂ ತಿಳಿಸಿದ್ದಾರೆ.

‘ಇಂಡಿಯನ್ ನಾಸ್ಟ್ರಾಡಾಮಸ್’ ಎಂದು ಕರೆಯಲ್ಪಡುವ ಕುಶಾಲ್ ಕುಮಾರ್ ಅವರು ಮೂರನೇ ಮಹಾಯುದ್ಧದ ಸನ್ನಿಹಿತ ಅಪಾಯದ ಬಗ್ಗೆ ಎಚ್ಚರಿಸಿದ್ದಾರೆ. ಈ ದುರಂತದ ಘಟನೆಯ ಸಂಭಾವ್ಯ ದಿನಾಂಕಗಳನ್ನು ಸಹ ಸೂಚಿಸಿದ್ದಾರೆ. ಮೂರನೇ ಮಹಾಯುದ್ಧವು ಆಗಸ್ಟ್ 4 ಅಥವಾ 5 ರಂದು ಪ್ರಾರಂಭವಾಗಬಹುದು ಎಂದು ಅವರು ಇತ್ತೀಚೆಗೆ ಮುನ್ಸೂಚನೆ ನೀಡಿದರು. ಈ ಹಿಂದೆ ಅವರು ಈ ಸಂಘರ್ಷದ ಪ್ರಾರಂಭದ ಬಗ್ಗೆ ಎರಡು ಮುನ್ಸೂಚನೆಗಳನ್ನು ನೀಡಿದ್ದರು. ಮೊದಲನೆಯದಾಗಿ ಜೂನ್ 18 ರ ನಂತರ ಯಾವುದೇ ಸಮಯದಲ್ಲಿ ಯುದ್ಧ ಪ್ರಾರಂಭವಾಗಬಹುದು ಎಂದು, ನಂತರ ಜುಲೈ 26 ಅಥವಾ 28 ರ ನಡುವೆ ಮೂರನೇ ವಿಶ್ವ ಯುದ್ಧ ಸಂಭವಿಸಬಹುದೆಂದಿದ್ದರು. ಈಗ ಅವರು  5 ಯುದ್ಧ ಪ್ರಾರಂಭವಾಗಬಹುದು ಎಂದು ಹೇಳಿದ್ದಾರೆ.

ಇಸ್ರೇಲ್-ಹಮಾಸ್ ಸಂಘರ್ಷ ಮತ್ತು ರಷ್ಯಾ-ಉಕ್ರೇನ್ ಯುದ್ಧದ ಬಗ್ಗೆಯೂ ಕುಶಾಲ್ ಕುಮಾರ್ ನಿಖರವಾದ ಮುನ್ಸೂಚನೆಗಳನ್ನು ನೀಡಿದ್ದರು. ಪ್ರಾದೇಶಿಕ ವಿವಾದಗಳು ಈ ರಾಷ್ಟ್ರಗಳ ನಡುವಿನ ಯುದ್ಧಗಳಿಗೆ ಕಾರಣವಾಗುತ್ತವೆ, ಇದರಿಂದಾಗಿ ವ್ಯಾಪಕವಾದ ಜೀವಹಾನಿ ಉಂಟಾಗುತ್ತದೆ ಎಂದು ಅವರು ಭವಿಷ್ಯ ನುಡಿದಿದ್ದರು.

ಕುಶಾಲ್ ಕುಮಾರ್ ಅವರ ಲಿಂಕ್ಡ್ ಇನ್ ಪ್ರೊಫೈಲ್‌ನ ಪ್ರಕಾರ ಅವರು ಹರಿಯಾಣದ ಪಂಚಕುಲದಲ್ಲಿ ನೆಲೆಸಿದ್ದಾರೆ ಮತ್ತು ಅವರು ಪ್ರಸಿದ್ಧ ಜ್ಯೋತಿಷ್ಯ ಲೇಖಕರಾಗಿದ್ದಾರೆ. ಕ್ಯಾಲಿಫೋರ್ನಿಯಾದ ‘ದಿ ಮೌಂಟೇನ್ ಆಸ್ಟ್ರೋಲಜರ್’ ಮತ್ತು ನ್ಯೂಯಾರ್ಕ್‌ನ ‘ಹೋರೊಸ್ಕೋಪ್’ ನಂತಹ ಪ್ರಮುಖ ಜ್ಯೋತಿಷ್ಯ ನಿಯತಕಾಲಿಕೆಗಳಲ್ಲಿ ಅವರ ಭವಿಷ್ಯವಾಣಿಗಳ ಬಗ್ಗೆ ಉಲ್ಲೇಖವಿದೆ. ವೈದಿಕ ಜ್ಯೋತಿಷ್ಯದಲ್ಲಿ ಪರಿಣತಿ ಹೊಂದಿರುವ ಅವರು ಆರ್ಥಿಕತೆ, ಹವಾಮಾನ, ವ್ಯಾಪಾರ, ತಂತ್ರ, ಯುದ್ಧ ಮತ್ತು ಜಾಗತಿಕ ವ್ಯವಹಾರಗಳು ಸೇರಿದಂತೆ ವಿವಿಧ ವಿಷಯಗಳ ಕುರಿತು ಮುನ್ಸೂಚನೆಗಳನ್ನು ನೀಡುತ್ತಾರೆ. ಅವರು ಜನನ ವಿವರಗಳನ್ನು ಆಧರಿಸಿ ವೈಯಕ್ತೀಕರಿಸಿದ ಭವಿಷ್ಯವಾಣಿಗಳನ್ನು ಸಹ ನೀಡುತ್ತಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read