
ಪುರುಷರ ಏಕದಿನ ಏಷ್ಯಾಕಪ್ ನಲ್ಲಿ ಭಾರತ ಹಾಗೂ ಶ್ರೀಲಂಕಾ ಮುಖಮುಖಿಯಾಗಿತ್ತು. ಇದೀಗ ಮಹಿಳಾ ಟಿ ಟ್ವೆಂಟಿ ಏಷ್ಯಾ ಕಪ್ ನಲ್ಲಿ ಭಾರತ ಮತ್ತು ಶ್ರೀಲಂಕಾ ತಂಡವೇ ಸೆಣಸಾಡಲಿದೆ.
ತಮ್ಮ ಸ್ಫೋಟಕ ಬ್ಯಾಟಿಂಗ್ ನಿಂದಲೇ ಹೆಸರುವಾಸಿಯಾಗಿರುವ 19 ವರ್ಷದ ಭಾರತದ ಯುವ ಆಟಗಾರ್ತಿ ಶಫಾಲಿ ವರ್ಮಾ ಅವರಿಂದ ರನ್ ಹೊಳೆ ಹರಿಯಲಿ ಎಂಬುದು ಅಭಿಮಾನಿಗಳ ಆಸೆಯಾಗಿದೆ.
ಮಹಿಳಾ ಕ್ರಿಕೆಟ್ ನಲ್ಲಿ ಶ್ರೀಲಂಕಾ ತಂಡ ಕೂಡ ಬಲಿಷ್ಠ ತಂಡವಾಗಿದ್ದು, ಸಾಕಷ್ಟು ಆಲ್-ರೌಂಡರ್ ಗಳನ್ನು ಹೊಂದಿದ್ದಾರೆ. ವುಮೆನ್ಸ್ ಪ್ರೀಮಿಯರ್ ಲೀಗ್ ಮೂಲಕ ಭಾರತದ ಮಹಿಳಾ ತಂಡದಲ್ಲಿ ಹೊಸ ಪ್ರತಿಭೆಗಳು ಸೇರ್ಪಡೆಯಾಗುತ್ತಿದ್ದಾರೆ. ಮಹಿಳಾ ಕ್ರಿಕೆಟ್ ಕೂಡ ಪ್ರೇಕ್ಷಕರಿಗೆ ಸಾಕಷ್ಟು ಮನರಂಜನೆ ನೀಡುತ್ತಿದೆ.
ಇಂದು ಬೆಳಗ್ಗೆ 11:30ಕ್ಕೆ ಪಂದ್ಯ ಆರಂಭವಾಗಲಿದೆ.