
ದುಬೈ: ದುಬೈ ಅಂತರರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆದ ಎ ಗುಂಪಿನ ಕೊನೆಯ ಪಂದ್ಯದಲ್ಲಿ ನ್ಯೂಜಿಲೆಂಡ್ ವಿರುದ್ಧ ಭಾರತ 44 ರನ್ ಗಳ ಅಂತರದಿಂದ ಭರ್ಜರಿ ಜಯಗಳಿಸಿದೆ.
250 ರನ್ ಗೆಲುವಿನ ಗುರಿ ಬೆನ್ನತ್ತಿದ ನ್ಯೂಜಿಲೆಂಡ್ 45.3 ಓವರ್ ಗಳಲ್ಲಿ 205 ರನ್ ಗೆ ಆಲೌಟ್ ಆಗಿದೆ.
ನ್ಯೂಜಿಲೆಂಡ್ ಪರ ವಿಲ್ ಯಂಗ್ 22, ರಚಿನ್ ರವೀಂದ್ರ 6, ಕೇನ್ ವಿಲಿಯಮ್ಸನ್ 81, ಡೇರ್ಲ್ ಮಿಚಲ್ 17, ಟಾಮ್ ಲೇಥಮ್ 14, ಗ್ಲೆನ್ ಫಿಲಿಪ್ಸ್ 12, ಮಿಚೆಲ್ ಬ್ರೇಸ್ ವೆಲ್ 2, ಮಿಚೆಲ್ ಸ್ಯಾಂಟ್ನರ್ 28, ಮ್ಯಾಥ್ ಹೆನ್ರಿ 2, ಕೈಲ್ ಜೇಮ್ಸನರ್ ಅಜೇಯ 9, ವಿಲ್ ಒ ರೂರ್ಕಿ 1 ರನ್ ಗಳಿಸಿದರು.
ಭಾರತದ ಪರ ವರುಣ್ ಚಕ್ರವರ್ತಿ 5, ಕುಲದೀಪ್ ಯಾದವ್ 2, ಹಾರ್ದಿಕ್ ಪಾಂಡ್ಯ, ಅಕ್ಷರ್ ಪಟೇಲ್, ರವೀಂದ್ರ ಜಡೇಜ ತಲಾ 1 ವಿಕೆಟ್ ಪಡೆದರು.
ಭಾರತ 50 ಓವರ್ ಗಳಲ್ಲಿ 9 ವಿಕೆಟ್ ನಷ್ಟಕ್ಕೆ 249 ರನ್ ಗಳಿಸಿದ್ದು, ನ್ಯೂಜಿಲೆಂಡ್ ಗೆಲುವಿಗೆ 250 ರನ್ ಗುರಿ ನೀಡಿತ್ತು.
ಟಾಸ್ ಗೆದ್ದ ನ್ಯೂಜಿಲೆಂಡ್ ನಾಯಕ ಮಿಚೆಲ್ ಸ್ಯಾಂಟ್ನರ್ ಮೊದಲು ಫೀಲ್ಡಿಂಗ್ ಆಯ್ದುಕೊಂಡಿದ್ದಾರೆ. ಮೊದಲು ಬ್ಯಾಟಿಂಗ್ ಮಾಡಿದ ಭಾರತದ ಪರವಾಗಿ ರೋಹಿತ್ ಶರ್ಮಾ 15, ಶುಭ ಮನ್ ಗಿಲ್ 2, ವಿರಾಟ್ ಕೊಹ್ಲಿ 11, ಶ್ರೇಯಸ್ ಅಯ್ಯರ್ 79, ಅಕ್ಷರ ಪಟೇಲ್ 42, ಕೆ.ಎಲ್. ರಾಹುಲ್ 23, ಹಾರ್ದಿಕ್ ಪಾಂಡ್ಯ 45, ರವೀಂದ್ರ ಜಡೇಜ 16, ಮಹಮ್ಮದ್ ಶಮಿ 5, ಕುಲದೀಪ್ ಯಾದವ್ ಅಜೇಯ 1, ವರುಣ್ ಚಕ್ರವರ್ತಿ 0 ರನ್ ಗಳಿಸಿದ್ದಾರೆ. ನ್ಯೂಜಿಲೆಂಡ್ ಪರವಾಗಿ ಮ್ಯಾತ್ ಹೆನ್ರಿ 5 ವಿಕೆಟ್ ಪಡೆದರು.
ಎ ಗುಂಪಿನಲ್ಲಿ ಸ್ಥಾನ ಪಡೆದಿರುವ ಭಾರತ ಮತ್ತು ನ್ಯೂಜಿಲೆಂಡ್ ಈಗಾಗಲೇ ಸೆಮಿಫೈನಲ್ ಪ್ರವೇಶಿಸಿದ್ದು, ಇಂದಿನ ಫಲಿತಾಂಶ ಯಾವುದೇ ಪ್ರಭಾವ ಬೀರುವುದಿಲ್ಲ. ಆದರೆ, ಅಜೇಯವಾಗಿ ಸೆಮಿಫೈನಲ್ ಪ್ರವೇಶಿಸುವ ಅವಕಾಶ ಭಾರತಕ್ಕೆ ಸಿಕ್ಕಿದೆ.
ಸಂಕ್ಷಿಪ್ತ ಸ್ಕೋರ್
ಭಾರತ 249/9(50 ಓವರ್)
ನ್ಯೂಜಿಲೆಂಡ್ 205/10(45.3 ಓವರ್)
CT 2025. India Won by 44 Run(s) https://t.co/Ba4AY30p5i #NZvIND #ChampionsTrophy
— BCCI (@BCCI) March 2, 2025
A Five Star Performance 🖐️
Varun Chakaravarthy with five wickets for the night 🥳
Updates ▶️ https://t.co/Ba4AY30p5i#TeamIndia | #NZvIND | #ChampionsTrophy | @chakaravarthy29 pic.twitter.com/CqIuZNNlQt
— BCCI (@BCCI) March 2, 2025